ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಘರ್ ವಾಪಸಾತಿ ನಡೆಯುತ್ತಿದ್ದು ಶಾಸಕ ಶಿವರಾಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಬಿಟ್ಟು ಆಮ್ ಆದ್ಮಿ ಪಾರ್ಟಿ ಸೇರಿದ್ದ ಬ್ರಿಜೇಶ್ ಕಾಳಪ್ಪ ಕೂಡ ಕಾಂಗ್ರೆಸ್ ಗೆ ವಾಪಸ್ ಆಗಿದ್ದಾರೆ.
ನಾಗಮಂಗಲ ಶಾಸಕರಾಗಿರುವ ಎಲ್ ಆರ್ ಶಿವರಾಮೇಗೌಡ ಬಿಜೆಪಿ ಪಕ್ಷ ಬಿಟ್ಟು ಪುತ್ರ ಚೇತನ್ ಗೌಡರೊಂದಿಗೆ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ ಇವರೊಂದಿಗೆ ಅಪಾರ ಸಂಖ್ಯೆಯ ಬೆಂಬಲಿಗರು ಕೂಡ ಕೈಪಕ್ಷ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಎಎಪಿ ಪಕ್ಷ ಸೇರಿದ್ದ ಬ್ರಿಜೇಶ್ ಕಾಳಪ್ಪ ಕೂಡಾ ಕಾಂಗ್ರೆಸ್ ಕೈ ಹಿಡಿದಿದ್ದಾರೆ
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಿವರಾಮೇಗೌಡ ಹಾಗೂ ಬ್ರಿಜೇಶ್ ಕಾಳಪ್ಪ ರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಬಾವುಟ ನೀಡಿ ಸ್ವಾಗತಿಸಿದ್ರು.
ದೇಶದಲ್ಲಿ ಅಭಿವೃದ್ಧಿ ಮಾಡುವ ಪಕ್ಷವೇನಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂಬುದನ್ನು ಮನಗಂಡಿರುವ ನಾಯಕರು ಕಾಂಗ್ರೆಸ್ ಪಕ್ಷದ ಕೈಹಿಡಿದಿದ್ದಾರೆ ಎಂದು ಇದೇ ವೇಳೆ ಡಿ.ಕೆ ಶೀವಕುಮಾರ್ ಹೇಳಿದ್ರು