ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನ ಪ್ರಶ್ನಾತೀತ ನಾಯಕ . ಎಲ್ಲಾ ಎಲೆಕ್ಷನ್ ಗೂ ಅವರು ನಮಗೆ ಬೇಕು ಎಂದು ಡಿಸಿಎಂ ಡಿಕೆಶಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವ್ರು , ಸಿದ್ದರಾಮಯ್ಯ ನಮ್ಮ ನಾಯಕ. ಬೆಳಿಗ್ಗೆ ಸಂಜೆ ಅವರ ಹೆಸರನ್ನು ಯಾರು ದುರ್ಬಳಕೆ ಮಾಡಬೇಡಿ.
ಅವರ ಹೆಸರನ್ನು ಎಲ್ಲಾಕಡೆ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ನಲ್ಲಿ ಯಾವ ಗೊಂದಲ ಇಲ್ಲ.ಎಲ್ಲವೂ ಸರಿಯಾಗಿದೆ. ಸಿಎಂ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಡಿಕೆಶಿ ಹೇಳಿದರು.
100 ಆಫೀಸ್ ಗುರಿ..!
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 100 ಕಾಂಗ್ರೆಸ್ ಕಚೇರಿಯನ್ನು ತೆರೆಯಲು ತೀರ್ಮಾನಿಸಿರೋದಾಗಿ ಡಿಸಿಎಂ ಡಿಕೆಶಿ ಹೇಳಿದ್ದಾರೆ. ಬೆಂಗಳೂರಲ್ಲಿ 3 ಹಾಗೂ ರಾಜ್ಯದ ಎಲ್ಲಾ ಕಡೆ ಸ್ವಂತ ಕಟ್ಟಡ ಹೊಂದುವ ಗುರಿ ಹೊಂದಲಾಗಿದೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.