ಮಂಗಳೂರು: ಜಾತಿಗಣತಿ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಪಕ್ಷಗಳು ಜಾತಿಗಣತಿಯನ್ನು ವಿರೋಧಿಸುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲದೇ ವಿರೋಧ ಏಕೆ ಮಾಡುತ್ತಾರೆ.
ವರದಿ ಇನ್ನೂ ಬಹಿರಂಗಗೊಳ್ಳದಿರುವುದರಿಂದ ಈ ಬಗ್ಗೆ ನನಗೂ ತಿಳಿದಿಲ್ಲ ಎಂದರು. ನಮ್ಮ ಪ್ರಣಾಳಿಕೆಯಲ್ಲಿ ಜಾತಿಗಣತಿಯನ್ನು ಮಂಡಿಸಲಾಗುವುದು ಎಂದು ಜನತೆಗೆ ಭರವಸೆ ನೀಡಲಾಗಿದೆ ಎಂದರು.