ಸೇಡಂ:– ತಾಲೂಕಿನ ಇಟಕಾಲ್ ಗ್ರಾಮದಲ್ಲಿ ಜೆಜೆಎಂ ಜಲ ಜೀವನ ಮಸಿನ್ ಕಾಮಗಾರಿಯು ದಿನಾಂಕ 19/09/2022 ರಂದು ಪ್ರಾರಂಭ ಮಾಡಿದ್ದು. ಇಲ್ಲಿಯವರೆಗೆ ಸುಮಾರು ಎರಡು ವರ್ಷಗಳಕಾಲ ಕಳೆದಿದೆ ಊರಲ್ಲಿ 50 % ರಷ್ಟು ರಸ್ತೆಗಳನ್ನು ಕೆರವಿ ಕಾಮಗಾರಿಯನ್ನು ನಿಲ್ಲಿಸಿದ್ದರೆ.ಇದರಿಂದ ಗ್ರಾಮದ ಸಾರ್ವಜನಿಕರಿಗೆ,ರೈತರ ಎತ್ತಿನ ಬಂಡಿಗಳಿಗೆ,ವಾಹನಗಳಿಗೆ, ಶಾಲೆ ಮಕ್ಕಳಿಗೆ,ತೊಂದರೆಯಾಗುತ್ತಿದೆ ಮತ್ತು ಕಾಮಗಾರಿಯ ಎಸ್ಟಿಮೆಂಟ್ ನ ದಾಖಲೆ ಸಹ ಕೇಳಿದರು ನೀಡುತ್ತಿಲ್ಲ.
ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸೇಡಂ ಮತ್ತು ತಾಲೂಕ ಪಂಚಾಯತಿ ಇಓ ಗುತ್ತಿಗೆದಾರರಿಗೆ ದೂರು ನೀಡಿದ್ದೇನೆ. ಹಾಗೂ ನಾನು ಪ್ರತ್ಯೇಕವಾಗಿ ಸೇಡಂ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಲೋಕಾಯುಕ್ತ ಅದಾಲತ್ ನಲ್ಲಿ ದೂರು ನೀಡಿದ್ದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಎಸಿ, ಎಡಬ್ಲ್ಯೂ,ಮತ್ತು ಇಓ, ಇವರು ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಲು ಗುತ್ತಿಗೆದರನಿಗೆ ತಿಳಿಸುತ್ತೇವೆ ಎಂದು ಹೇಳಿದರು.
ಆದರೆ ಇಲ್ಲಿಯವರೆಗೆ ಯಾವುದೇ ಕಾಮಗಾರಿಯು ಪ್ರಾರಂಭವಾಗಿಲ್ಲ ಆದೇ ರೀತಿಯಾಗಿ ಯಾವುದೇ ಕೆಲಸವು ಪೂರ್ಣವಾಗದೆ ಮೊದಲನೇ ಕಂತಿನ ಹಣ ಬಿಡುಗಡೆ ಆಗಿರುತ್ತದೆ ಇದರಿಂದ ನಮಗೆ ಅವ್ಯವಹಾರ ಆಗಿದೆ ಎಂದು ಕಂಡುಬರುತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಳು ಸೂಕ್ತ ಕ್ರಮವಹಿಸಬೇಕು ಮತ್ತು ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಸಂಬಂಧ ಪಟ್ಟ ಕಛೇರಿಯ ಮುಂದೆ ಧರಣಿ ಮಾಡುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆನಂದ ಮೌರ್ಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ತಾಲೂಕ ಪ್ರಧಾನ ಕಾರ್ಯದರ್ಶಿ
ಅಂಬೇಡ್ಕರ್ ಯುವ ಸೇನೆ ಸೇಡಂ ಇವರು ಎಚ್ಚರಿಕೆಯ ಮನವಿ ಮಾಡಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.