Ad imageAd image

ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ :  ಬಿ. ವೈ ವಿಜಯೇಂದ್ರ 

Bharath Vaibhav
ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ :  ಬಿ. ವೈ ವಿಜಯೇಂದ್ರ 
BY VIJENDRA
WhatsApp Group Join Now
Telegram Group Join Now

ಬೆಂಗಳೂರು : ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ. ಅದನ್ನು ಹಿರಿಯರು ನಮ್ಮ ಮಾರ್ಗದರ್ಶಕರಾಗಿರುವ ಪ್ರಲ್ಹಾದ್ ಜೋಷಿಯವರು ಬಗೆಹರಿಸಲಿದ್ದಾರೆ ಎಂದು ಬಿ.ವೈ .ವಿಜಯೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದು, ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ ಎಂದರು.

ನಾನೂ ಕೂಡಾ ಹಿಂದಿನ ಸಭೆಯಲ್ಲಿ ಅವರಿಗೆ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲು ಮನವಿ ಮಾಡಿದ್ದೆ. ಜಿಲ್ಲೆಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಸಹ ನಾವು ಚರ್ಚಿಸಲಿದ್ದೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ರವಿಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರವಿಕುಮಾರ್ ಅವ್ರು ಅವರ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ‌. ಐಎಎಸ್ ಅಸೋಸಿಯೇಷನ್ ನವ್ರು ಸಿಎಂಗೆ ದೂರು ಕೊಟ್ಟಿದ್ದಾರೆ‌. ಆದರೆ ಖುದ್ದು ಸಿಎಂ ಅವರೇ ಅಧಿಕಾರಿಗಳ ವಿರುದ್ಧ ನಡೆದುಕೊಂಡಾಗ ಈ ಅಸೋಸಿಯೇಷನ್ ಗಳು ಆಗ ಎಲ್ಲಿ‌ ಹೋಗಿದ್ದವು ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article
error: Content is protected !!