ಹೈದರಾಬಾದ್: 2025 ರ ವಿಶ್ವ ಸುಂದರಿ ಸ್ಪರ್ಧೆ ಈ ಬಾರಿ ಭಾರತೀಯ ನೆಲದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿಶ್ವದ 109 ಸುಂದರಿಯರು ಹೈದರಾಬಾದ್ ತಲುಪಿದ್ದಾರೆ.
ಎಲ್ಲಾ ಸ್ಪರ್ಧಿಗಳು ಚಾರ್ಮಿನಾರ್‌ನಲ್ಲಿ ಪಾರಂಪರಿಕ ನಡಿಗೆ ಮಾಡಿ ಚೌಮೊಹಲ್ಲಾ ಅರಮನೆಯಲ್ಲಿ ಭೋಜನ ಮಾಡಿದರು. ಹೈದರಾಬಾದ್‌ನ ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಆನಂದಿಸಿದರು. ಇನ್ನು ವಾರಂಗಲ್ ನ ಸಾವಿರ ಕಂಬದ ದೇವಸ್ಥಾನ, ವಾರಂಗಲ್ ಕೋಟೆ ಮತ್ತು ರಾಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು. ಇಲ್ಲಿ ಅವರು ಸಾಂಸ್ಕೃತಿಕ ಕೇಂದ್ರದಲ್ಲಿ ಪೆರಿನಿ ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸಪಟ್ಟರು.
72ನೇ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಪ್ರದರ್ಶನ ಮೇ 31 ರಂದು ಹೈದರಾಬಾದ್‌ನ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.
ಮೇ 16 ರಂದು ಎರಡು ಗುಂಪುಗಳು ವೈದ್ಯಕೀಯ ಪ್ರವಾಸೋದ್ಯಮ ಮತ್ತು ಪಿಲ್ಲಾಲಮರೋ ಆಲದ ಮರಕ್ಕೆ ಭೇಟಿ ನೀಡಲಿವೆ.
17ಕ್ಕೆ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ : ಮೇ 17 ರಂದು ಬೆಳಗ್ಗೆ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಮಿಸ್ ವರ್ಲ್ಡ್ ಸ್ಪೋರ್ಟ್ಸ್ ಫಿನಾಲೆಯಲ್ಲಿ ಎಲ್ಲ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ . ನಂತರ ಮಧ್ಯಾಹ್ನ ಅವರು ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಲಿದ್ದಾರೆ.