ಸಿಂಧನೂರು : ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ರಾಯಚೂರು ವತಿಯಿಂದ ನಾಳೆ ಲಿಂಗಸುಗೂರಿನಲ್ಲಿ ಜನವರಿ 30ರಂದು ಭಾರತ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಲಿಯನ್ನುವ ಜನತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು.
ಈ ಸಮಾವೇಶದಲ್ಲಿ ಧಾರ್ಮಿಕ ಮುಖಂಡರು, ಪ್ರಮುಖ ಚಳುವಳಿಗಾರರು, ಗುರು ವರ್ಗದ ಶರಣರು, ಹಾಗೂ ಸಿಂಧನೂರಿನಿಂದ ರೈತರು ಕಾರ್ಮಿಕರು ದಲಿತ ಶೋಷಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಭಾಗವಹಿಸುವರು, ಹಾಗೂ ಸಂವಿಧಾನ ಒಪ್ಪುವ ಜನತೆಯು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಲು, ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾರಂಗ ಸಿಂಧನೂರು ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ಸಂದರ್ಭದಲ್ಲಿ, ಸಂಯೋಜಕರುಗಳಾದ – ನಾರಾಯಣ ಬೆಳಗುರ್ಕಿ, ಮೌನೇಶ್ ಜಾಲವಾಡಗಿ, ಬಸವರಾಜ ಗುಡಿಹಾಳ, ಮಹಂ ಕಾಳಪ್ಪ ಮಲ್ಲಾಪುರ, ಎಚ್, ಆರ್, ಹೊಸಮನಿ, ಆಸಿಫ್ ಇನ್ನಿತರರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ