Ad imageAd image

ದೊಡ್ಡಬಿದರುಕಲ್ಲು ವಾರ್ಡಿನ ಅವ್ಯವಸ್ಥೆಗೆ ವಿ.ಪ ಸದಸ್ಯ ಟಿ.ಎನ್. ಜವರಾಯೀಗೌಡ ಅಸಮಾಧಾನ

Bharath Vaibhav
ದೊಡ್ಡಬಿದರುಕಲ್ಲು ವಾರ್ಡಿನ ಅವ್ಯವಸ್ಥೆಗೆ ವಿ.ಪ ಸದಸ್ಯ ಟಿ.ಎನ್. ಜವರಾಯೀಗೌಡ ಅಸಮಾಧಾನ
WhatsApp Group Join Now
Telegram Group Join Now

ಬೆಂಗಳೂರು: ಯಶವಂತಪುರ ವಿಧಾನ ಸಭಾ ಕ್ಷೇತ್ರದ ದೊಡ್ಡಬಿದರುಕಲ್ಲು ವಾರ್ಡಿನ ತಿಪ್ಪೇನಹಳ್ಳಿಯ ಸಾಯಿ ಬೈರವೇಶ್ವರ ಲೇಔಟ್ ನಿಂದ ಆಚೆ ಹೋಗಲು ಸರಿಯಾದ ಒಳಚರಂಡಿ ಸಂಪರ್ಕ ಇಲ್ಲದೇ ತಟಸ್ಥವಾಗಿದ್ದ ಕಲುಷಿತ ನೀರು ಮಳೆಗಾಲುವೆ ಚರಂಡಿಗಳಲ್ಲಿ ತುಂಬಿಕೊಂಡು ಮನೆ ಒಳಗೆ ನೀರು ನುಗ್ಗುವ ಭಯ ಭೀತಿ ಎದುರಾಗಿದ್ದು ಹಲವಾರು ತಿಂಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂಬ ನಿವಾಸಿಗಳ ದೂರಿನ ಮೇರೆಗೆ ಕ್ಷೇತ್ರದ ಜೆಡಿಎಸ್ ಪ್ರಭಾವಿ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯೀಗೌಡ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳಿಯ ಶಾಸಕ ಬರೀ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡುತ ಕಾಲಹಗರಣ ಮಾಡುತ್ತಿದ್ದಾರೆ ಸಮಸ್ಯೆಗಳಿಗೆ ತಿರುಗಿನೋಡುತ್ತಿಲ್ಲ , ಜನಗಳ ಸಮಸ್ಯೆಗಳಿಗೆ ಕೊನೆಪಕ್ಷ ಮೂಲಭೂತ ಸೌಕರ್ಯಗಳು ಒದಗಿಸುತ್ತಿಲ್ಲ ಇದೇನಾ ನಿಮ್ಮ ಅಡಳಿತ ಎಂದು ಶಾಸಕರ ಹೆಸರು ಹೇಳದೇ ಹರಿಹಾಯ್ದರು.

ಒಳಚರಂಡಿ ಮಂಡಳಿಯ ಎಡವಟ್ಟಿನಿಂದ‌‌ ಕಸ ವಿಲೇವಾರಿ ಘಟಕದಿಂದ ಉಂಟಾದ ಕೊಳಚೆ ನೀರು ಇಲ್ಲಿಗೆ ಬಂದು ನಿಲ್ಲುತ್ತಿದ್ದು ಇಲ್ಲಿಂದ ಮುಂದೆ ಹೋಗಲು ಸಂಪರ್ಕ ಇಲ್ಲದಿರುವುದೇ ಸಮಸ್ಯೆಕ್ಕೆ ಕಾರಣ, ಜಾಗದ ಕೊರತೆ ಎಂದು ಹೇಳುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳುತ್ತಿದ್ದಾರೆ.ಇಲ್ಲಿಯ ಜನರು ಈ ದುರ್ವಾಸನೆಯಿಂದ ರೋಸಿಹೋಗಿದ್ದಾರೆ. ಸಂಬಂಧ ಪಟ್ಚ ಅಧಿಕಾರಿಗಳು ಮಳೆಗಾಲ ಆರಂಭಕ್ಕೂ ಮುನ್ನ ಒಳಚರಂಡಿ ಪೈಪ್ ಅಳವಡಿಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಟಿಎನ್ ಜವರಾಯೀಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಎಇಇ ಮಂಜುನಾಥ್ ಮಾತನಾಡಿ, ‘ಎರಡು ವರ್ಷದಿಂದ ಒಳಚರಂಡಿ ಕಾಮಗಾರಿ ಮುಂದುವೆರದಿದ್ದು ಲೇಔಟ್ ನಿಂದ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಮುಖಾಂತರ ಬೇರೆಡೆಗೆ ನೀರನ್ನು ಸಾಗಿಸಬೇಕಿದೆ ಅದರೆ ನೈಸ್ ರಸ್ತೆಯ ಕೆಳಸೇತುವೆ ಹತ್ತಿರ ಡಂಪೀಂಗ್ ಮಾಡಿ ಪೈಪ್ವಮುಖಾಂತರ ಸಾಗಿಸಬೇಕು ಹಾಗಾಗಿಟೆಂಡರ್ ಪ್ರಕಿಯೆ ಮುಗಿದಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದ್ದು ಪಂಪಿಂಗ್ ಸ್ಟೇಷನ್ ಆರಂಭಿಸಲಿದ್ದೇವೆ ಎಂದರು.

ಸ್ಥಳಿಯ ನಿವಾಸಿ ಚಂದ್ರಶೇಖರ್ ಹೇಳಿಕೆ: ಸಮಸ್ಯೆಗೆ ಶಾಸಕರಾಗಲಿ ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ದಿನ‌ನಿತ್ಯದ ದುರ್ವಾಸನೆ ಯಿಂದ ಮನೆ ಖಾಲಿ ಮಾಡುವ ಪರಿಸ್ಥಿತಿಗೆ ಬಂದಿದ್ದೇವೆ ಎಂದರು.

ಮಹಿಳಾ ನಿವಾಸಿ ಕಮಲಮ್ಮ ಮಾತನಾಡಿ ಒಂದು ವರ್ಷದಿಂದ‌ ಕಲುಷಿತ ಒಳಚರಂಡಿ ನೀರು ಇಲ್ಲಿಗೆ ಬಂದು ನಿಲ್ಲುತ್ತಿದ್ದು ಇಲ್ಲಿನ ಸುತ್ತ ಮುತ್ತಲಿನ ಬಡಾವಣೆಯಲ್ಲಿ ವಾಸಿಸುತ್ತಿರುವ ನಾವುಗಳು ಚಿಕ್ಕ ಮಕ್ಕಳಿಗೆ ದುರ್ವಾಸನೆಯಿಂದ‌ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದರು‌.

ಈ ಸಂದರ್ಭದಲ್ಲಿ ದೊಡ್ಡಬಿದರಕಲ್ಲು ವಾರ್ಡಿನ ಜೆಡಿಎಸ್ ಮುಖಂಡರಾದ ಟ್ರಾವೆಲ್ಸ್ ಮಂಜು, ಭೈರೇಗೌಡ್ರು, ಹೊಸಹಳ್ಳಿ ಚಲುವರಾಜ್, ಜೆಸಿಬಿ ಮಂಜುನಾಥ್ ಗಂಗ ಹನುಮಯ್ಯ, ಚಿಕ್ಕಣ್ಣ, ನಟರಾಜು, ಸತೀಶ್, ಕೆಂಪಣ್ಣ, ಚಂದ್ರಪ್ಪ, ಪುನೀತ್ ಸೇರಿದಂತೆ ಲೇವಟಿನ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!