Ad imageAd image

ಮುತ್ತಗಿ ಗ್ರಾಮದಲ್ಲಿ ಕುಲುಷಿತ ನೀರು ಸೇವನೆ : ತಾಲೂಕು ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರು

Bharath Vaibhav
ಮುತ್ತಗಿ ಗ್ರಾಮದಲ್ಲಿ ಕುಲುಷಿತ ನೀರು ಸೇವನೆ : ತಾಲೂಕು ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರು
WhatsApp Group Join Now
Telegram Group Join Now

ಕಲಘಟಗಿ:- ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಹೊಸ ಬೋರ್ವೆಲ್ ನ ಕುಲುಷಿತ ನೀರು ಸೇವನೆ ಮಾಡಿ ವಾಂತಿ ಬೇದಿಯಿಂದ ನರಳಾಡಿ ತೀವ್ರ ಅಸ್ವಸ್ಥಗೊಂಡ ಘಟನೆ ಗುರುವಾರ ನಡೆದಿದೆ.


ಮುತ್ತಗಿ ಗ್ರಾಮದ ಹೊರ ವಲಯದ ಹಳ್ಳ ಒಂದರಲ್ಲಿ ಇತ್ತೀಚೆಗೆ ಗ್ರಾಮಕ್ಕೆ ಕುಡಿಯುವ ನೀರಿನ ಅಭಾವ ಇರುವುದರಿಂದ ಹೊಸ ಬೋರ ವೆಲ್ ಕೊರಿಸಲಾಗಿತ್ತು . ಎಡಬಿಡದೆ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರು ಬೋರ್ವೆಲ್ ನೀರಿನಲ್ಲಿ ತುಂಬಿಕೊಂಡು ಕೂಡಿಕೊಂಡಿದೆ ಗ್ರಾಮಸ್ಥರು ತಿಳಿಯದೆ ನೀರು ಸೇವನೆ ಮಾಡಿದಾಗ ಅಸ್ವಸ್ಥರಾಗಿದ್ದಾರೆ ಕೂಡಲೆ ಕಲಘಟಗಿ ತಾಲೂಕ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಪ್ರಾಣಾಪಯವಾಗಿಲ್ಲ ಸುಮಾರು 15-20 ಗ್ರಾಮಸ್ಥರು ನೀರು ಸೇವನೆಯಿಂದ ಬಳಲಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಸ್ಪತ್ರೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರು ಜಿಲ್ಲಾ ವೈದ್ಯಾಧಿಕಾರಿ ತಾ ಪಂಇಓ ಪಿ ವೈ ಸಾವಂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ ಮಂಜುನಾಥಗೌಡ ಮುರಳಿ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ವರದಿ :-ಶಶಿಕುಮಾರ ಕಟ್ಟಿಮನಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!