ಇಸ್ಲಾಮಾಬಾದ್ : ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ನ್ಯಾಯಯುತವಾದ ನೀರಿನ ಪಾಲನ್ನು ಭಾರತ ನೀಡದಿದ್ದರೆ ನಾವು ಯುದ್ಧಕ್ಕೆ ಇಳಿಯಲಿದ್ದೇವೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಧಮ್ಕಿ ಹಾಕಿದ್ದಾನೆ.
ಕಳೆದ ಏ.22 ರಂದು 26 ಜನರನ್ನು ಬಲಿತೆಗೆದುಕೊಂಡ ಪಾಕ್ ಪೋಷಿತ ಉಗ್ರರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು 1960ರ ಸಿಂಧೂ ನದಿ ಒಪ್ಪಂದವನ್ನು ರಾಜತಾಂತ್ರಿಕದ ಭಾಗವಾಗಿ ಸ್ಥಗಿತಗೊಳಿಸಿತು.
ಐತಿಹಾಸಿಕ ಈ ಒಪ್ಪಂದವನ್ನು ಎಂದಿಗೂ ಪುನಃಸ್ಥಾಪಿಸುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಘೋಷಿಸಿದ್ದಾರೆ.
‘ಭಾರತದ ಮುಂದೆ ಎರಡು ಆಯ್ಕೆಗಳಿವೆ: ಒಂದೋ ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳಿ, ಅಥವಾ ನಾವು ಆರು ನದಿಗಳಿಂದಲೂ ನಮಗೆ ನೀರನ್ನು ಪಡೆಯುತ್ತೇವೆ” ಎಂದು ಬಿಲಾವಲ್ ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾನೆ. ಒಪ್ಪಂದವನ್ನು ರದ್ದು ಮಾಡದ ಕಾರಣಕ್ಕೆ ಐಡಬ್ಲ್ಯೂಟಿ ಅಂದ್ರೆ ಸಿಂಧೂ ನದಿ ನೀರಿನ ಒಪ್ಪಂದ ಇನ್ನೂ ಚಾಲ್ತಿಯಲ್ಲಿದೆ ಎಂದು ಬಿಲಾವಲ್ ಹೇಳಿದ್ದಾನೆ.