Ad imageAd image

ಮೋದಿ ಏನು ಪೈಲೆಟಾ? ಯಾಕೆ ರಾಜೀನಾಮೆ ಕೊಡಬೇಕು? : ಸಿಎಂ ಇಬ್ರಾಹಿಂ

Bharath Vaibhav
ಮೋದಿ ಏನು ಪೈಲೆಟಾ? ಯಾಕೆ ರಾಜೀನಾಮೆ ಕೊಡಬೇಕು? : ಸಿಎಂ ಇಬ್ರಾಹಿಂ
WhatsApp Group Join Now
Telegram Group Join Now

ಬೆಂಗಳೂರು : ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ.

ಇನ್ನು ಈ ದುರಂತದ ಬಗ್ಗೆ ನಾನಾ ಚರ್ಚೆ ನಡೆಯುತ್ತಿವೆ. ಕಾಂಗ್ರೆಸ್​ನ ಕೆಲ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದೇ ವಿಚಾರದ ಬಗ್ಗೆ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿದ್ದು, ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಪ್ರಕರಣಕ್ಕೂ ಮೋದಿಗೆ ಏನು ಸಂಬಂಧ? ಮೋದಿ ಏನು ಪೈಲೆಟಾ? ಯಾಕೆ ರಾಜೀನಾಮೆ ಕೊಡಬೇಕು? ಬೇಕಿದ್ದರೆ ನಾಗರಿಕ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು ಎಂದರು.

ಭಾರತದ ಪೈಲಟ್​ಗಳು ವಿಶ್ವದಲ್ಲೇ ಅತ್ಯುತ್ತಮ ಸಿಎಂ ಇಬ್ರಹಾಂ 90ರ ದಶಕದಲ್ಲೇ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದರು. ನಿನ್ನೆ ನಡೆದ ದುರಂತ ಭಾರತದ ಇತಿಹಾಸದಲ್ಲೇ ಅತಿ ದೊಡ್ಡದು.

ಸೋಜಿಗದ ಸಂಗತಿಯೆಂದರೆ ದುರಂತ ಸಂಭವಿಸಿ 24 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದರೂ ನಾಗರಿಕ ವಿಮಾನಯಾನ ಸಚಿವಾಲಯಯ ಇದುವರೆಗೆ ಕಾರಣವನ್ನು ತಿಳಿಸಿಲ್ಲ, ಎಲ್ಲರೂ ಬ್ಲ್ಯಾಕ್ ಬಾಕ್ಸ್​ ಹುಡುಕುವುದರಲ್ಲೇ ಇದ್ದಾರೆ. ಆದರೆ, ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ ಎಂದು ಇಬ್ರಾಹಿಂ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!