ಅಹ್ಮದಾಬಾದ್ : ಇಂದು ಗುಜರಾತಿನ ಅಹಮದಾಬಾದ್ ನಲ್ಲಿ ಏರ್ಪೋರ್ಟ್ ಬಳಿಯೇ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ.
ಪತನಗೊಂಡ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಬಿದ್ದಿದೆ. ಈ ಒಂದು ಘಟನೆಯಲ್ಲಿ 20 ಮೆಡಿಕಲ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ಇದೀಗ ವ್ಯಕ್ತವಾಗಿದೆ.
ಹೌದು ವಿಮಾನ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲಿಗೆ ನುಗ್ಗಿದೆ. ಹಾಸ್ಟೆಲಿಗೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದೆ. ಹಾಸ್ಟೆಲಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟ ಶಂಕೆ ಇದೀಗ ವ್ಯಕ್ತವಾಗುತ್ತಿದೆ.
ಮೆಡಿಕಲ್ ಕಾಲೇಜು ಮೇಲೆ ವಿಮಾನ ಬಿದ್ದಿದೆ ಬೆಂಕಿಯ ಕೆನ್ನಾಲಿಗೆ ಹಾಸ್ಟೆಲ್ ಹೊತ್ತಿ ಉರಿದಿದೆ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಊಟಕ್ಕೆಂದು ಬಂದಾಗ ಈ ಒಂದು ದುರಂತ ಸಂಭವಿಸಿದೆ. ಊಟ ಮಾಡುವಾಗಲೇ ವಿಮಾನ ಪತನಗೊಂಡಿದೆ.