ಚಂದಾಪುರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ವ್ಯವಸ್ಥಾಪಕಿಯೊಬ್ಬರು ಗ್ರಾಹಕರ ಜೊತೆಗೆ ಕನ್ನಡ ಮಾತನಾಡುವುದಿಲ್ಲ. ಇದು ಇಂಡಿಯಾ ಎಂದು ದುರಂಹಕಾರದಿಂದ ವರ್ತಿಸಿ ದ್ದಾರೆ. ಆನೇಕಲ್ ತಾಲೂಕು ಚಂದಾ ಪುರದ ಎಸ್‌ಬಿಐನಲ್ಲಿ ಈ ಪ್ರಸಂಗ ನಡೆದಿದ್ದು, ಈ ದೃಶ್ಯ ವೈರಲ್ ಆಗಿದೆ.
ಆಗಿದ್ದೇನು: ಚಂದಾಪುರ ಗ್ರಾಹಕ, ಕೆಆರ್‌ಎಸ್ ಪಕ್ಷದ ಮುಖಂಡ ಮಹೇಶ್ ಎಂಬುವರು ಹಣ ಬಿಡಿಸಿಕೊಳ್ಳಲು ಮಂಗಳವಾರ ಎಸ್‌ಬಿಐಗೆ ಬಂದಿದ್ದಾರೆ.
ಈ ವೇಳ ಕ್ಯಾಶ್ ಕೌಂಟರ್ ನಲ್ಲಿ ಯಾರು ಇರಲಿಲ್ಲ. ಹೀಗಾಗಿ ವ್ಯವಸ್ಥಾಪಕಿ ಪ್ರಿಯಾಂಕ ಬಳಿ ಹೋಗಿ, ಕ್ಯಾಶ್ ಕೌಂಟರ್‌ನಲ್ಲಿ ಯಾರೂ ಇಲ್ಲ. ನಮಗೆ ವಿಳಂಬ ಮಾಡುತ್ತಿದ್ದೀರಿ. ಸುಖಾ ಸುಮ್ಮನೆ
ಕಾಯಿಸುತ್ತಿದ್ದೀರಿ ಎಂದು ಕನ್ನಡದಲ್ಲಿ ಹೇಳಿದ್ದಾರೆ.
ಇದಕ್ಕೆ ಮ್ಯಾನೇಜರ್ ಪ್ರಿಯಾಂಕಾ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಗ ಮಹೇಶ್ “ನನಗೆ ಕನ್ನಡಲ್ಲಿ ಉತ್ತರಿಸಿ, ಕನ್ನಡ ಮಾತನಾಡಿ’ ಎಂದು ಕೇಳಿದ್ದಾರೆ. “ನೋ ನೋ ಕನ್ನಡ ಮಾತನಾಡೋದಿಲ್ಲ. ಇದು ಇಂಡಿಯಾ, ಕನ್ನಡ ಏಕೆ ಮಾತನಾಡ ಬೇಕು. ಎಂದಿಗೂ ಕನ್ನಡ ಮಾತನಾಡೋ ದಿಲ್ಲ’ ಎಂದು ಪ್ರಿಯಾಂಕಾ ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಬಳಿಕ ಸ್ಥಳೀಯ ಜಯ ಕರ್ನಾಟಕ ಸಂಘಟನೆಯ ಕಿರಣ್ ಪ್ರಭಾಕರ್‌ರೆಡ್ಡಿ, ಪದಾಧಿ ಕಾರಿಗಳುಬ್ಯಾಂಕ್‌ಗೆ ಭೇಟಿ ನೀಡಿ ಮ್ಯಾನೇಜರ್ ವರ್ತನೆಯನ್ನು ಖಂಡಿಸಿದ್ದಾರೆ.