ಬೆಂಗಳೂರು :ನಿನ್ನೆ ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಶಾ ಸಭೆಯ ವಿಚಾರವಾಗಿ ಆರ್ ಅಶೋಕ್ ಮಾತನಾಡಿ, 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಈ ಕುರಿತಂತೆ ಬೆಂಗಳೂರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರೆವು ಜಾಸ್ತಿ ಆಗಿದೆ. ಏನೇನೋ ಮಾತನಾಡುತ್ತಾರೆ. ಎಸ್‌ಪಿಗೆ ಹೊಡೆಯಲು ಹೋಗುತ್ತಾರೆ.
ಮನಮೋಹನ್ ಸಿಂಗ್ ಪುಣ್ಯಾತ್ಮ ಗೊಂಬೆ ತರಹ ಇದ್ದವರು. 10 ವರ್ಷದಲ್ಲಿ ಮನಮೋಹನ್ ಸಿಂಗ್ ಎಷ್ಟು ಹಣ ಕೊಟ್ಟಿದ್ದಾರೆ? ಡಾ. ಮನಮೋಹನ್ ಸಿಂಗ್ ಅವರಿಗಿಂತ ಮೋದಿ 4 ಪಟ್ಟು ಹೆಚ್ಚು ಹಣ ಕೊಟ್ಟಿದ್ದಾರೆ.
ಜನರ ಮೇಲೆ ತೆರಿಗೆ ಹಾಕಿ ಸುಲಿಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಔಟ್ ಗೋಯಿಂಗ್ ಸರ್ಕಾರ. 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರವಾದ ಆರೋಪ ಮಾಡಿದರು.