ಬೆಂಗಳೂರು: ನೀವು ಆಂಡ್ರಾಯ್ಡ್ ಹೊಂದಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಶೀಘ್ರದಲ್ಲೇ ನಿಮ್ಮ ಫೋನ್ ಬಳಕೆಯ ಅನುಭವ ಹೊಚ್ಚ ಹೊಸದರಂತೆ ಬದಲಾಗಲಿದೆ. ಈ ಹೊಸ ಅನುಭವವನ್ನು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಂಡ್ರಾಯ್ಡ್ 16 ನೀಡಲಿದ್ದು, ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆಂಡ್ರಾಯ್ಡ್ 16 ಬಿಡುಗಡೆಯನ್ನು ಟೆಕ್ ದೈತ್ಯ ಗೂಗಲ್ ದೃಢಪಡಿಸಿದೆ. ಕಂಪನಿಯು ಮುಂದಿನ ತಿಂಗಳು ಅಂದರೆ ಜೂನ್‌ನಲ್ಲಿ ಆಂಡ್ರಾಯ್ಡ್ 16 ಅನ್ನು ಬಿಡುಗಡೆ ಮಾಡಲಿದೆ.