ಇಲಕಲ್ :-ಕಂದಗಲ್ -ಭಾರತ ಕೃಷಿ ಪ್ರಧಾನ್ ರಾಷ್ಟ್ರ, ರೈತರ ಆಚರಣೆಗಳು ಕೃಷಿಯನ್ನೇ ಆಧಾರಿಸಿದ್ದು ಮಳೆಗಾಲ ಪ್ರಾರಂಭ ವಾಗುತ್ತಿದ್ದಂತೆ ರೈತರಲ್ಲಿ ಒಂದೊಂದಾಗಿ ಕೃಷಿ ಚಟುವಟಿಕೆಗಳು ಶುರುವಾಗುತ್ತವೆ ವರ್ಷರಂಭದಿಂದ್ ಕೊನೆಯ ವರೆಗೂ ಬರುವ ಐದು ಬಗೆಯ ಮಣ್ಣಿನ ಪೂಜೆಗಳಲ್ಲಿ ಪ್ರಥಮದಲ್ಲಿ ಈ ಮಣ್ಣೇತ್ತು ಪೂಜೆ ರೈತರು ರೈತ ಮಹಿಳೆಯರು ಶ್ರದ್ದಾ ಭಕ್ತಿಯಿಂದ ಆಚರಿಸುವ ಹಬ್ಬ -ಮಣ್ಣೇತ್ತು. ಗುಳ್ಳವ್ವ್.ನಾಗಪ್ಪ. ಗಣಪತಿ. ಹಾಗೂ ಜೋಕುಮಾರ. ಈ ಐದು ಹಬ್ಬಗಳಲ್ಲಿ ರೈತರು ಮಣ್ಣಿನ ಮೂರ್ತಿಗಳಿಗೆ ಪೂಜೆ ಮಾಡುತ್ತಾರೆ.
ಮಣ್ಣು ಹಾಗೂ ಎತ್ತು ಇವೆರಡು ಅನ್ನದಾತನ ಬದುಕಿಗೆ ಮಹತ್ವ ವಾದವು ಭೋತಾಯಿಯ ರೊಪವಾದ ಮಣ್ಣು ಹಾಗೂ ಬೇಸಾಯಕ್ಕೆ ಹೆಗಲು ಕೊಡುವ ಎತ್ತು ಇವೆರಡರ ಸಂಗಮವಾದ ಮಣ್ಣಿನ ಎತ್ತು ಪೂಜಿಸುವ ಸಂಪ್ರದಾಯ ಮಣ್ಣೆತ್ತಿನ ಅಮಾವಾಸ್ಯೆ ದಿನ ಬೆಳೆದು ಬಂದ ಸಂಪ್ರದಾಯ.ರೈತರು ಮಣ್ಣಿನ ಎತ್ತುಗಳನ್ನು ಶೃಂಗರಿಸಿ ಭಕ್ತಿಯಿಂದ ಪೂಜಿಸಿ ಧನ್ಯರಾಗುವ ಪರಂಪರೆ ಮಣ್ಣೆತ್ತಿನ ಅಮಾವಾಸ್ಯೆದ್ದಾಗಿದೆ ಅಮಾವಾಸ್ಯೆ ದಿನ ರೈತರು ಹಣ ಕೊಟ್ಟು ಇಲ್ಲವೆ ದವಸ ಧಾನ್ಯಗಳನ್ನು ಕೊಟ್ಟು ಮಣ್ಣಿನ ಜೋಡೆತ್ತುಗಳನ್ನು ತಂದು ಮನೆಯ ಜಗುಲಿ ಮೇಲೆ ಇಟ್ಟು ದೇವರ ಸ್ವರೋಪದಲ್ಲಿ ಭಕ್ತಿಯಿಂದ ಪೂಜಿಸಿ ಜಾತಿ ಭೇದ ಭಾವವಿಲ್ಲದೆ ಮುಸ್ಲಿಂ ರೈತರು ನೇಕಾರರು ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲರೂ ಭಕ್ತಿಯಿಂದ ಪೂಜಿಸುತ್ತಾರೆ.
ನೆರೆಯಿರಲಿ ಬರಇರಲಿ ಮಣ್ಣೇತ್ತು ಪೂಜೆ ನಿಷ್ಠೆ ಭಕ್ತಿ ಯಿಂದ್ ಮಾಡುತ್ತಾರೆ
ಅಮಾವಾಸ್ಯೆ ಮರುದಿನ ಮಕ್ಕಳು ಕೊರಳಲ್ಲಿ ಗೆಜ್ಜೆಸರ್ ಗುಮುರಿ ಕೈಯಲ್ಲಿ ಒಂದು ಕಾಲು ಮುರಿದ ಮಣ್ಣೇತ್ತು ಹಿಡಿದುಕೊಂಡು” ಎಂಟತ್ತಿನಾಗ ಒಂದು ಕುಂಟ ಎತ್ತು ಬಂದೈತಿ ಜೋಳ್ ನೀಡರೆಮೋ “ಎಂದು ಕೊಗುತ್ತಾ ಇಡಿ ಊರು ಸುತ್ತಿ ಜೋಳ ಸಜ್ಜಿ ಅಕ್ಕಿ ಹಾಗೂ ಇನ್ನಿತರ ದಾನ್ಯ ಹಣ ಪಡೆದು ಬಂದ ಧಾನ್ಯಗಳನ್ನು ಮಾರಾಟ ಮಾಡಿ ಆ ಹಣದಿಂದ ಚುರುಮರಿ ಬೆಲ್ಲ ಕಾಯಿ ಪಂಚ ಫಳಾರ ಖರೀದಿಸಿ ಕಾಲು ಮುರಿದ ಎತ್ತುಗಳನ್ನು ಬಾವಿಯಲ್ಲಿ ಎಸೆದು ಪಳಾರವ ನ್ನು ಓಣಿ ತುಂಬ ಹಂಚಿ ಪ್ರಸಾದ್ ಸೇವಿಸಿ ಈ ಹಬ್ಬವನ್ನು ಆಚರಿಸುತ್ತಾರೆ
ವರದಿ :-ದಾವಲ್ ಶೇಡಂ