Ad imageAd image

ಸೆಕ್ಯೂರಿಟಿ ಸಾಮೂಹಿಕ ಸಾಲ ಸೌಲಭ್ಯ ಪಡೆದುಕೊಳ್ಳಿ:ರವೀಂದ್ರ ಪಾಟೀಲ್ ಸಲಹೆ

Bharath Vaibhav
ಸೆಕ್ಯೂರಿಟಿ ಸಾಮೂಹಿಕ ಸಾಲ ಸೌಲಭ್ಯ ಪಡೆದುಕೊಳ್ಳಿ:ರವೀಂದ್ರ ಪಾಟೀಲ್ ಸಲಹೆ
WhatsApp Group Join Now
Telegram Group Join Now

ನಿಪ್ಪಾಣಿ:  ಸೆಕ್ಯೂರಿಟಿ ಸಾಮೂಹಿಕ ಸಾಲ ಸೌಲಭ್ಯ ಪಡೆದುಕೊಳ್ಳಿ ಸದಲಗಾ ಅರ್ಬನ್ ಬ್ಯಾಂಕ್ ಬೇಡಕಿಹಾಳ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ರವೀಂದ್ರ ಪಾಟೀಲ್ ಸಲಹೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿಂದು ಸಹಕಾರಿ ಸಂಸ್ಥೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದು ಕಠಿಣವಾಗಿದೆ ಗ್ರಾಹಕರು ಬ್ಯಾಂಕಿಗೆ ಹಾಗೂ ತಮಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾದರೆ 20 ಗ್ರಾಹಕರು ಗುಂಪಿನಿಂದ ಸೆಕ್ಯೂರಿಟಿ ಸಾಲ ಪಡೆಯಬಹುದು ಇದರಿಂದಾಗಿ ಬ್ಯಾಂಕಿಗೂ ಭದ್ರತೆ ಹಾಗೂ ಸಾಲಗಾರರಿಗೂ ಬಡ್ಡಿಯ ಹೊರೆ ಬೀಳದು ಎಂದು ಬೆಳಗಾವಿ ಪ್ರಾಂತ ಉಪನಿರ್ದೇಶಕರಾದ ರವೀಂದ್ರ ಪಾಟೀಲ್ ತಿಳಿಸಿದರು.

ಅವರು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕಿನ 10ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಕಾಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. . ಪ್ರಾರಂಭದಲ್ಲಿ ಲಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಇಂದ್ರಜಿತ್ ಪಾಟೀಲ ರಿಬ್ಬನ ಬಿಚ್ಚಿ ಶಾಖೆಯ ಉದ್ಘಾಟನೆ ನೆರವೇರಿಸಿದರು.

ತದನಂತರ ಲಾಕರ್ ಉದ್ಘಾಟನೆ ಉಪಸ್ಥಿತ ಗಣ್ಯರ ಹಸ್ತದಿಂದ ನಡೆಯಿತು. ಸಮಾರಂಭದಲ್ಲಿ ಉಪಾಧ್ಯಕ್ಷ ಉದಯಕುಮಾರ್ ಪಾಟೀಲ ಮುಖ್ಯ ಕಾರ್ಯನಿರ್ವಾಹಕ ಸುನಿಲ ಪಾರಿಸ ಖೋತ ಎಲ್ಲ ನಿರ್ದೆಶಕ ಮಂಡಳಿಯ ಸದಸ್ಯರು,ಸೇರಿ ಶಮನೇವಾಡಿ ಬೇಡಕಿಹಾಳ, ನೇಜ ಸದಲಗಾ,ಭೋಜ ಚಾಂದಶಿರದವಾಡ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

ವರದಿ : ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!