Ad imageAd image

ಶ್ರೀ ಬಸವೇಶ್ವರ ಟೆಂಪಲ್ ಇಂಟರ್ನ್ಯಾಷನಲ್ ಸ್ಕೂಲ್  ನ 13ನೇ ವಾರ್ಷಿಕೋತ್ಸವ

Bharath Vaibhav
ಶ್ರೀ ಬಸವೇಶ್ವರ ಟೆಂಪಲ್ ಇಂಟರ್ನ್ಯಾಷನಲ್ ಸ್ಕೂಲ್  ನ 13ನೇ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಬಸವನ ಬಾಗೇವಾಡಿ: ಪಟ್ಟಣದ ಶ್ರೀ ಬಸವೇಶ್ವರ ಟೆಂಪಲ್ ಇಂಟರ್ನ್ಯಾಷನಲ್ ಸ್ಕೂಲ್  ನ 13ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಶ್ರೀ ಶಿವಾನಂದ ಪಾಟೀಲ್ ಸಕ್ಕರೆ. ಜವಳಿ. ಹಾಗೂ ಕೃಷಿ ಮಾರುಕಟ್ಟೆ ಸಚಿವರು ಮತ್ತು ಪೂಜ್ಯರು ಊರಿನ ಗಣ್ಯರು ಸೇರಿಕೊಂಡು ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದಂತ ಶಿವಾನಂದ್ ಪಾಟೀಲ್ ಅವರು ಇಂಗ್ಲಿಷ್ ಮಾಧ್ಯಮದ ಈ ಶಾಲೆಯು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಗೆ ಬೇಕಾದ ಹಲವಾರು ಸೌಲಭ್ಯಗಳನ್ನು ಕೊಡುವುದಾಗಿ ಭರವಸೆ ನೀಡಿದರು. ಈ ಶಾಲೆಯು ಮಾದರಿಯಾಗಿ ಬೆಳೆಯಲಿ ಎಂದು ಹಾರೈಸಿದರು.ರಾಜ್ಯ ಪ್ರಶಸ್ತಿ ಪಡೆದ ಶ್ರೀ ಬಸವರಾಜ್ ಹಾರಿವಾಳ ಅವರು ಜಾನಪದ ಗೀತೆಯನ್ನು ಹಾಡಿದರು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ಪಡೆದದ್ದಕ್ಕಾಗಿ. ಶಾಲೆಗೆ ಸರಿಯಾಗಿ ಬಂದದ್ದಕ್ಕಾಗಿ ಆಟ ಪಾಠಗಳಲ್ಲಿ ಜಯಶೀಲರಾದವರಿಗೆ ಉತ್ತಮ ಶಿಕ್ಷಕರಿಗೆ ಉತ್ತಮ ವಿದ್ಯಾರ್ಥಿಗಳಿಗೆ ಹಾಡುಗಾರರಿಗೆ ಶಾಲೆಗೆ ದೇಣಿಗೆ ಕೊಟ್ಟವರಿಗೆ ಬಹುಮಾನ ವಿತರಣೆ ಮಾಡಿದರು.
ಸಾನಿಧ್ಯ ವಹಿಸಿದ ಶ್ರೀ ಮ. ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಸವನ ಬಾಗೇವಾಡಿ ಇವರು ಆಶೀರ್ವಚನ ನೀಡಿದರು.

ವೇದಿಕೆಯು ಅಚ್ಚುಕಟ್ಟಾಗಿ ಸುಂದರವಾಗಿ ನಿರ್ಮಿಸಿದ್ದರು ಕಾರ್ಯಕ್ರಮಗಳು ಶಿಸ್ತನಿಂದ ಜರುಗಿದವು.
ಯಾವ ವಿದ್ಯಾರ್ಥಿಗಳು ವೇಷ ಭೂಷಣ ಧರಿಸಿ ಹಾ ಡು ಡ್ಯಾನ್ಸ್ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಾಡನ್ನು ಹಾಡಿ ಮನರಂಜಿಸಿದರು. ವೇದಿಕೆಯ ಮುಂಬಾಗವು ಪಾಲಕರಿಂದ ಗಣ್ಯರಿಂದ ತುಂಬಿ ತುಳುಕುತ್ತಿತ್ತು. ಶ್ರೀ ಅನಿಲ್ ಅಗರರ್ವಾಲ್ ಎಸ್ ಡಿ ಎಂಸಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಯ ನಿರ್ದೇಶಕರಾದ ಎಸ್.ಎಸ್. ಝಳಕಿ ಶ್ರೀ ಎಂ ಜಿ ಆದಿಗೊಂಡ ಹಾಗೂ ಎಲ್ಲಾ ನಿರ್ದೇಶಕರು ಶ್ರೀ ಲೋಕನಾಥ್ ಅಗರ್ವಾಲ್ ವಸಂತ್ ರಾಥೋಡ್ ಕ್ಷೇತ್ರ ಶಿಕ್ಷಣ ಅಧಿಕಾರಗಳು ಶಿಕ್ಷಕರು ಗುರುಮಾತೆಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಒಟ್ಟಾರೆಯಾಗಿ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆಕರ್ಷಣೆಯವಾಗಿ ಸುಂದರವಾಗಿ ನಡೆಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!