Ad imageAd image

ಅಂದ್ರಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ :ಶಾಸಕ ಎಸ್ ಟಿ ಸೋಮಶೇಖರ್

Bharath Vaibhav
ಅಂದ್ರಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ :ಶಾಸಕ ಎಸ್ ಟಿ ಸೋಮಶೇಖರ್
WhatsApp Group Join Now
Telegram Group Join Now

ಬೆಂಗಳೂರು  : ಈಗಿನ ಪರಿಸ್ಥಿತಿಯಲ್ಲಿ ನಮಗೆ ಗೊತ್ತಾಗಲಾರದ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆ ದೃಷ್ಟಿಯಿಂದ ನಮ್ಮ ಪಕ್ಷದ ಹಿರಿಯ ನಾಯಕಿ ಅಂಥೋನಿ ಮೆರಿಮ್ಮ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.

ಅವರು ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ಅಂದ್ರಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಮಾರ್ಗದರ್ಶನ ಸಲಹೆ ಸಹಕಾರದೊಂದಿಗೆ ಕಾಂಗ್ರೆಸ್ ಹಿರಿಯ ನಾಯಕಿ ಅಂಥೋನಿ ಮೆರಿಮ್ಮ ಅವರ ನೇತೃತ್ವದಲ್ಲಿ ಮೋದಿ ಆಸ್ಪತ್ರೆ ಮತ್ತು ಹೋಮಿಯೋಪತಿ ಆಸ್ಪತ್ರೆಗಳ ಸಹಯೋಗದಲ್ಲಿ “ಬೃಹತ್ ಆರೋಗ್ಯ ತಪಾಸಣೆ ಮತ್ತು ಉಚಿತ ಕನ್ನಡ, ಔಷಧಿ ವಿತರಣೆ” ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೊಡ್ಡ ಬಿದರಿಕಲ್ಲ್ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು ಸರ್ವರಿಗೂ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ನಾಗರಾಜು ಅಂದ್ರಹಳ್ಳಿ, ಅಂದ್ರಹಳ್ಳಿ ಕಾಂಗ್ರೆಸ್ ಯುವ ಮುಖಂಡ ಪ್ರಕಾಶ್, ಕೇಶವಮೂರ್ತಿ, ನಾಗಣ್ಣ, ಮುನಿರಾಜು, ಹನುಮಣ್ಣ, ಅರುಣ್ ದತ್ತಿ ನಾಗರಾಜ್, ಕಾವೇರಪ್ಪ, ದೀಪು, ಸತೀಶ್, ಬಸವರಾಜು, ಎ.ರವಿಕುಮಾರ್, ವಾರ್ಡ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ನಾಗವೇಣಿ, ಚಂದ್ರಕಲಾ, ಶೀಲಾ, ರಾಜೇಶ್ವರಿ,ವೇದಾವತಿ, ಫಾದರ್ ಜಾರ್ಜ್ ಕನ್ನನ್ ತಾಗಂ,ಲೀನಾ ಥಾಮಸ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!