Ad imageAd image

ಐಕೂರು ಗ್ರಾಮ ಪಂಚಾಯಿತಿಗೆ ಕಿವಿ ಹೃದಯ ಎರಡು ಇಲ್ಲ: ನಾಗರಿಕರ ಆರೋಪ

Bharath Vaibhav
ಐಕೂರು ಗ್ರಾಮ ಪಂಚಾಯಿತಿಗೆ ಕಿವಿ ಹೃದಯ ಎರಡು ಇಲ್ಲ: ನಾಗರಿಕರ ಆರೋಪ
WhatsApp Group Join Now
Telegram Group Join Now

ವಡಗೇರಾ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಐಕೂರು ಗ್ರಾಮ ಪಂಚಾಯತಿಗೆ ಕಿವಿ ಮತ್ತು ಹೃದಯ ಎರಡೂ ಇಲ್ಲ. ಯಾದಗಿರಿ ಸಿಇಓ ಅವರ ಜವಬ್ದಾರಿಗಳೇನೋ ನಮಗಂತೂ ಅರ್ಥವಾಗುತ್ತಿಲ್ಲ.

ಈ ಕುರಿತು ಇಓ ಅವರೊಂದಿಗೆ ಮಾತನಾಡಿದರೂ ಪ್ರಯೋಜನೆ ಇಲ್ಲ. ರಾಜ್ಯದಲ್ಲಿ ಆಡಳಿತದಲ್ಲಿರುವುದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಅನ್ನುವ ಭಾವನೆಯೇ ಯಾರಲ್ಲೂ ಮೂಡುತ್ತಿಲ್ಲ. ಈ ಕ್ಷೇತ್ರದ ಶಾಸಕ ಚೆನ್ನಾರಡ್ಡಿ‌ ಕೇವಲ ಚುನಾವಣೆಯ ಶಾಸಕನಂತಾಗಿದೆ. ಗ್ರಾಮದ ಸಮಸ್ಯೆಗಳನ್ನು ಸ್ಥಳೀಯವಾಗಿ‌ ಮೊದಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ತರಬೇಕಿರುತ್ತದೆ, ತಂದರೆ ಹಾರಿಕೆಯ ಉತ್ತರ. ಮೇಲಾಧಿಕಾರಿ ಇಓ ಅವರ ಗಮನಕ್ಕೆ ತರಬೇಕಿರುತ್ತದೆ, ಅಲ್ಲೂ ಏಮಾರಿಸುವಿಕೆ!

ಈಗ ಯಾರ ಗಮನಕ್ಕೆ ತಂದರೆ ಏನು ಪ್ರಯೋಜನೆ?: ಐಕೂರು ಗ್ರಾಮದ ದಲಿತ ಕೇರಿಯ ಸಮಸ್ಯೆಗಳನ್ನು ಕೇಳುವವರು ಯಾರು? ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಟಕ್ಕುಂಟು ಲೆಖ್ಖಕ್ಕಿಲ್ಲ ಎಂಬಂಥಿದ್ದಾರೆ. ಜನ ಯಾರಿಗೆ ದೂರು ನೀಡಬೇಕು?

ಈ ಪ್ರಶ್ನೆ ಮಿಲಿಯನ್‌ ಡಾಲರ್ ಪ್ರಶ್ನೆಯಾಗಿ ಯಾದಗಿರಿಯ ಜನರನ್ನು ಕಾಡುತ್ತಿದೆ.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!