Ad imageAd image

ದಲಿತರ ಸಮಾನತೆಗೆ ಕೂಗು ಹಾಕುತ್ತಿರುವ ಭೀಮ ಘರ್ಜನೆ ಯುವರಾಜ್ ಬಣ ಸಂಘಟನೆ

Bharath Vaibhav
ದಲಿತರ ಸಮಾನತೆಗೆ ಕೂಗು ಹಾಕುತ್ತಿರುವ ಭೀಮ ಘರ್ಜನೆ ಯುವರಾಜ್ ಬಣ ಸಂಘಟನೆ
WhatsApp Group Join Now
Telegram Group Join Now

——————————-ಶಾಸಕ ಲಕ್ಷ್ಮಣ್ ಸೌದಿ ಅವರ ಮತಕ್ಷೇತ್ರದಲ್ಲಿ ದಲಿತರಿಗೆ ಅನ್ಯಾಯ

ಅಥಣಿ:  ತಾಲ್ಲೂಕಿನ ಸಂಕೋನಟ್ಟಿ ಎಂಬ ಗ್ರಾಮದಲ್ಲಿ ಇನ್ನೂ ದಲಿತರಿಗೆ ಅಸ್ಪೃಶ್ಯತೆಯ ಮಹಾಮಾರಿ ಕಾಡುತ್ತಿದೆ. ಹೌದು ಸ್ನೇಹಿತರೆ ಭಾರತ ರತ್ನ ಡಾ. ಬಿ. ಆರ. ಅಂಬೇಡ್ಕರ್ ಅವರ ಕಾಲಾವಧಿಯಲ್ಲಿ ದಲಿತರಿಗೆ ಅಸ್ಪೃಶ್ಯತೆಯ ಭೀಕರ ಸಂಕಷ್ಟವನ್ನು ನಾವು ಕೆಳಿದ್ದೆವೆ.  ಆದರೆ ಈಗ 2025 ನೇ ಇಸವಿಯಲ್ಲಿ ಅಥಣಿ ತಾಲ್ಲೂಕಿನ ಸಂಕೋನಟ್ಟಿ ಎಂಬ ಗ್ರಾಮದಲ್ಲಿ ಬದುಕುವ ದಲಿತರಿಗೆ ಇವತ್ತು ಸಹ ಹೋಟೆಲ್ , ದೇವಾಲಯದಲ್ಲಿ ಪ್ರವೇಶವನ್ನು ನಿಷೇಧ ಮಾಡಲಾಗಿದೆ , ಹೋಟೆಲಗಳಲ್ಲಿ ಪ್ರವೇಶವಾದರು ಇವರಿಗೆ ವಿಶೇಷವಾಗಿ ಪೇಪರ ಹಾಳೆಯಲ್ಲಿ ತಿಂಡಿಯನ್ನು ಹಾಗೂ ವಿಶೇಷವಾದ ಲೋಟದಲ್ಲಿ ನೀರು ಕೊಡಲಾಗುತ್ತದೆ.

ಕ್ಷೌರಿಕನ ಹತ್ತಿರ ಹೋದರೆ ದಲಿತರಿಗೆ ಕ್ಷೌರ್ಯ ಸಹ ಮಾಡುವದಿಲ್ಲವೆಂದ ನೇರವಾಗಿ ನಿರಾಕರಿಸುತ್ತಾರೆ. ಅದೇ ರೀತಿ ಯಾರಾದರೂ ಪ್ರಶ್ನೆ ಮಾಡಿದರೆ ಮೆಲ್ಜಾತಿಗೆ ಸಂಬಂಧಿಸಿದ ಜನರಿಂದ ಏಟು ಬಿಳ್ಳುವುದು ಸಹ ಅಷ್ಟೇ ಸತ್ಯವಾಗಿದೆ ಆದುದರಿಂದ ದಲಿತರು ಇದನ್ನು ಅಸ್ಪೃಶ್ಯತೆ ಎಂದು ಭಾವಿಸದೆ , ಸಂಕಷ್ಟವಾದರೂ ಸಹ ಸಂಪ್ರದಾಯವೆಂದು ಮೆಲ್ಜಾತಿಯ ಜನರಿಗೆ ಸಹಕರಿಸಿ ಸುಮ್ಮನಾಗಿ ಜೀವನ ನಡೆಸುತ್ತಿರುವುದು ಅಮಾನವೀಯ ಘಟನೆಯಾಗಿದೆ‌.

ವರದಿ: ಅಜಯ್ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!