Ad imageAd image

53ನೇ ಶಿವಾನುಭವ, ಸಮಾರಂಭ

Bharath Vaibhav
53ನೇ ಶಿವಾನುಭವ, ಸಮಾರಂಭ
WhatsApp Group Join Now
Telegram Group Join Now

ಕಂದಗಲ್ಲ : ಎಲ್ಲರನ್ನು ರಮಿಸುವ ಕಲೆ ಎಂದರೆ ಸಂಗೀತ. ಎಲ್ಲ ಗಾಯನಗಳ ಮೂಲ ಸಂಗೀತ.. ಸಂಗೀತ,ಚಿಂತೆ ದೂರ ಸರಿಸುವ ಔಷಧಿ.ಸಂಗೀತದಿಂದಲೇ ನಮ್ಮ ಜೀವನಕ್ಕೆ ಆರೋಗ್ಯ ಕೂಡ ಸಿಗುತ್ತದೆ ಎಂದು ಕಂದಗಲ್ಲಿನ ಸುವರ್ಣಗಿರಿ ಶ್ರೀ ರುದ್ರಸ್ವಾಮಿ ಮಠದ ಡಾ. ಮ. ನಿ. ಪ್ರ ಚನ್ನಮಲ್ಲ ಮಹಾಸ್ವಾಮಿಗಳು ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಜರುಗಿದ 53ನೇ ಶಿವಾನುಭವ, ಸಮಾರಂಭದ ನೇತೃತ್ವ
ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ 2024 – 25 ನೇ ಸಾಲಿನ ಪಿಯುಸಿ ಮತ್ತು ಎಸ್. ಎಸ್. ಎಲ್. ಸಿ ಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಬಸವರಾಜ. ವಿ. ಶಿಂಪಿ, ಅಮರೇಶ.ಮ.ಮಠ, ದಿವ್ಯ ಶರಣಪ್ಪ ಮಡಿವಾಳರ, ಬಸವರಾಜೇಶ್ವರಿ ವೀರೇಶ ತುಂಬದ, ಜ್ಯೋತಿ ಮಲ್ಲಪ್ಪ ಕಡಿವಾಲ,ನಾಗರತ್ನ ಚಂದ್ರು ಬುಕೀಟಗಾರ, ಮೌಲಾಬಿ ಖಾದರಸಾಬ್ ಕುದುರಿ, ಸಹನಾ ವಿಜಯ್ ಕುಮಾರ್ ಶಿವನಗುತ್ತಿ, ಸಾಗರ್ ಶಿವನಗುತ್ತಿ, ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಸಂಗೀತ ನೀಡಿದ ಆಕಾಶವಾಣಿ ದೂರದರ್ಶನ ಕಲಾವಿದರಾದ ಸಂಗಮೇಶ್ ನೀಲಿಮಠ, ಪ್ರತಾಪ್ ಕುಮಾರ್ ಹಿರೇಮಠ ಕುಷ್ಟಗಿ ಮತ್ತು ಅತಿಥಿ ಸ್ಥಾನ ಅಲಂಕರಿಸಿ ಪ್ರಸಾದ ಸೇವೆಯನ್ನು ಒದಗಿಸಿದ ಮಂಜುನಾಥ ಕಡಿವಾಲ ಇವರುಗಳನ್ನು ಸತ್ಕರಿಸಲಾಯಿತು.

ದಿವ್ಯಾ ಮಡಿವಾಳರ ಪ್ರಾರ್ಥನೆ ಮಾಡಿದರು, ಪಂಪಣ್ಣ ಸಜ್ಜನ್ನ ಸ್ವಾಗತಿಸಿದರು, ಕು. ಶಾಲಿನಿ ಹಿರೇಮಠ್ ನುಡಿ ನಮನ ಸಲ್ಲಿಸಿದರು, ಮಹಾಂತೇಶ.ಮ. ಕಡಿವಾಲ ವಂದಿಸಿದರು. ಕು. ರಂಜಿತಾ ಐದನಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು,ಮಹಿಳೆಯರು, ಮಕ್ಕಳು ಹಾಗೂ ಕಂದಗಲ್ಲ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!