Ad imageAd image

ಮುಂಗಾರು ಬೆಳ್ಳಿ ಹಬ್ಬಕ್ಕೆ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಆಗಮನ ನಮ್ಮ ಪುಣ್ಯ : ಎ.ಪಾಪಾರೆಡ್ಡಿ

Bharath Vaibhav
ಮುಂಗಾರು ಬೆಳ್ಳಿ ಹಬ್ಬಕ್ಕೆ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಆಗಮನ ನಮ್ಮ ಪುಣ್ಯ : ಎ.ಪಾಪಾರೆಡ್ಡಿ
WhatsApp Group Join Now
Telegram Group Join Now

ರಾಯಚೂರು : ಮುನ್ನೂರು ಕಾಪು ಸಮಾಜದ 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬಕ್ಕೆ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಪ್ರಪ್ರಥಮ ಬಾರಿಗೆ ಆಗಮಿಸಿರುವುದು ಮುನ್ನೂರು ಕಾಪು ಸಮಾಜದ ಹಾಗೂ ಜಿಲ್ಲೆಯ ಜನರ ಪುಣ್ಯ ಎಂದು ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಮಾಜಿ ಶಾಸಕರು ಹಾಗೂ ಹಬ್ಬದ ರೂವಾರಿ ಎ. ಪಾಪಾರೆಡ್ಡಿ ಅವರು ಹೇಳಿದರು.

ಅವರಿಂದು ನಗರದ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ಮಂತ್ರಿಗಳು ಕೂಡ ಅವರ ಭೇಟಿಗೆ ಕಾಯುವಂತ ಸ್ಥಿತಿ ಇದೆ. ಈ ಭಾಗದ ಜನಪ್ರಿಯ ಹಬ್ಬ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಸ್ವಾಮೀಜಿಗಳ ಆಗಮನ ಹಬ್ಬಕ್ಕೆ ಮತ್ತಷ್ಟು ವೈಭವದ ಮೆರುಗು ಬಂದಿದೆ. ಈ ಕಾರ್ಯಕ್ರಮದ ದಿವ್ಯಾ ಸಾನಿಧ್ಯವನ್ನು ವಹಿಸಿರುವುದು ನನಗೆ ಬಹಳ ಸಂತೋಷದಾಯಕವಾಗಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಬಿಚ್ಚಾಲಿಯ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಸಿದ್ದಲಿಂಗ ಮಹಾಸ್ವಾಮಿಗಳು, ಅಭಿನವ ರಾಚೋಟಿ ಮಹಾಸ್ವಾಮಿಗಳು,ನವಲಕಲ್‌ನ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯಾ ಸಾನಿಧ್ಯ ವಹಿಸಿದ್ದರು.

ವರದಿ :  ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!