Ad imageAd image

ಅಡವಿಸಿದ್ಧರಾಮ ಸ್ವಾಮಿಜಿ ವಿರುದ್ಧ ತನ್ನಗಾಗದ ಶಿವಾಪೂರ ಗ್ರಾಮಸ್ಥರ ಆಕ್ರೋಶ

Bharath Vaibhav
ಅಡವಿಸಿದ್ಧರಾಮ ಸ್ವಾಮಿಜಿ ವಿರುದ್ಧ ತನ್ನಗಾಗದ ಶಿವಾಪೂರ ಗ್ರಾಮಸ್ಥರ ಆಕ್ರೋಶ
WhatsApp Group Join Now
Telegram Group Join Now

ಮೂಡಲಗಿ: ತಾಲೂಕಿನ ಶಿವಾಪೂರ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ಧರಾಮ  ಸ್ವಾಮಿಜಿಗಳ ಮಠದ ರೂಮಿನಲ್ಲಿ ಶನಿವಾರ ರಾತ್ರಿ ಇಬ್ಬರು ಮಹಿಳೆಯರು ಸಿಕ್ಕ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಟ್ರಸ್ಟ್ ಕಮಿಟಿ ವತಿಯಿಂದ ಪಿ.ಎಸ.ಐ. ಹಾಗೂ ಸಿ.ಪಿ.ಐ. ಅವರ ಸಮ್ಮುಖದಲ್ಲಿ ಸ್ವಾಮಿಜಿಯವರನ್ನು ಬಹಿಷ್ಕಾರ ಮಾಡಲಾಗಿತ್ತು.

ಅದರ ವಿಚಾರವಾಗಿ ಸ್ವಾಮೀಜಿಗಳ ಕೆಲವೊಂದು ಭಕ್ತಾದಿಗಳು ಅವರ ಮನ ಒಲಿಸಿ ಕರೆತರಲು ಹೋಗಿದ್ದು ,ಅದರ ವಿಚಾರವಾಗಿ ಶ್ರೀ ಮಠದಲ್ಲಿ ಮಂಗಳವಾರ ಸಾವಿರಾರು ಭಕ್ತಾದಿಗಳು ಸೇರಿ ಆಕ್ರೋಶ ವ್ಯಕ್ತಪಡಿಸಿ ಸ್ವಾಮಿಜಿಗಳನ್ನು ನಾವು ಯಾವುದೇ ಕಾರಣಕ್ಕೂ ಮಠಕ್ಕೆ ಸೇರಿಸುವುದಿಲ್ಲ,ನಮ್ಮ ಮಠಕ್ಕೆ ಆರೋಪ ಹೊತ್ತ ಸ್ವಾಮಿಜಿ ಬರುವ ಮುಂಚೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಆದರೆ ಇವರು ಬಂದ ನಂತರ ಜಾತಿ ಜಾತಿಗಳ ನಡುವೆ ಜಗಳ ಹಚ್ಚಿದ್ದಾರೆ ಹಾಗೂ 2024 ರ ಮಠದ ಜಾತ್ರಾ ಸಮಯದಲ್ಲಿ ಅನ್ನ ದಾಸೋಹಕ್ಕೆ ಅನ್ಯ ಕೊಮೀನ ಜನರ ಪ್ರಸಾದ ತರುವುದು ಬೇಡ ಅಂತ ಡಂಗುರ ಸಾರಿದ್ದಾರೆ ಎಂದು ಆರೋಪಿಸಿದರು. ಅಂತಹ ಭಾವನೆ ಇರುವಂತಹ ಸ್ವಾಮಿಜಿ ನಮಗೆ ಯಾವುದೇ ಕಾರಣಕ್ಕೂ ಬೇಡ ಅಂತ ಸೇರಿದ ನೂರಾರು ಮಹಿಳೆಯರು,ಮುಖಂಡರು, ಗ್ರಾಮಸ್ಥರು ಈ ಸಮಯದಲ್ಲಿ ತಮ್ಮ ಅಂತಿಮ ನಿರ್ಣಯವನ್ನು ಹೇಳಿದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!