ವಿಜಯಪುರ: ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿ “ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸುವುದು ಹಾಗೂ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ ಅಧಿಸೂಚನೆ ಹೊರಡಿಸುವಬೇಕು ರೈತ ಸಮಿತಿ ಒತ್ತಾಯ.
ನಿಡಗುಂದಿಯ ಹೊಸ ಬಸ್ ನಿಲ್ದಾಣದಿಂದ ಪ್ರಮುಖ ಬೀದಿ ಬೀದಿಗಳಲ್ಲಿ ರೈತರು ದಿಕ್ಕಾರದ ಕೂಗು ಕೇಳಿ ಬಂತು.
ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ರೈತಪರ ಸಂಘಟನೆ ಹೋರಾಟಗಾರರ ಪ್ರತಿಭಟನೆ,
ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲು ಪ್ರಯತ್ನಿಸಿದರು, ಪ್ರಮುಖ ಬೀದಿಗಳ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಹಾಕುತ್ತಾ ನಿಡಗುಂದಿಯ ಮುದ್ದೇಶವರ ದೇವಸ್ಥಾನ ಎದುರು ವೇದಿಕೆ ಕಾರ್ಯಕ್ರಮ ನಡೆಯಿತು.

ವೇದಿಕೆ ಕಾರ್ಯಕ್ರಮದ ಮಧ್ಯೆದಲ್ಲಿ ವರ್ಣನ ಆರ್ಭಟ ಪ್ರಾರಂಭವಾದರೂ ಕುಗ್ಗದ ಜಗ್ಗದ ರೈತರು.
ಮಾಜಿ ಶಾಸಕರು ಹಾಗೂ ಸಚಿವರು ಎಸ್ ಕೆ ಬೆಳ್ಳುಬ್ಬಿ ರೈತರಿಗೆ ಬೆಂಬಲವನ್ನು ಸೂಚಿಸಿ ಮಾತನಾಡಿದರು.
ರೈತರ ಹಕ್ಕೊತ್ತಾಯಗಳು.
1) ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದು. 2) ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನಿಲ್ಲಿಸಲು ನ್ಯಾ॥ ಬ್ರಜೇಶ್ ಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣದ ತೀರ್ಪಿನಂತೆ ಗೇಟ್ ಅಳವಡಿಸಿ ನೀರಿನ ಮಟ್ಟ ಹೆಚ್ಚಿಸುವುದು.
3) ಈ ಯೋಜನೆಗೆ ತಗಲುವ ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವುದು.
4) ಆಲಮಟ್ಟಿ ಹಿನ್ನೀರಿನಿಂದ ಬಾಗಲಕೋಟ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ ತಾಲೂಕಿನ ಜಮೀನುಗಳು- ಹಿನ್ನೀರಿನಿಂದ ಮುಳುಗಡೆಯಾಗಿದ್ದು ಇನ್ನು ಪರಿಹಾರ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ಶೀಘ್ರದಲ್ಲಿ ಪರಿಹಾರ ಹಣ ಬಿಡುಗಡೆಗೊಳಿಸಬೇಕು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಎಸ್ ಕೆ ಬೆಳ್ಳೂಬ್ಬಿ ಮಾತನಾಡಿದರು. ರೈತರ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವೇದಿಕೆಯ ಮೇಲೆ ನಿಡಗುಂದಿ ದಂಡಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.
ರೈತರಿಗೆ ಬೆಂಬಲವನ್ನು ನೀಡಿದ ಶ್ರೀಗಳು ಸಂಗನಬಸವ ಸ್ವಾಮಿಗಳು, ಶ್ರೀ ರುದ್ರಮುನಿ ಮಹಾಸ್ವಾಚಾರ್ಯರು, ಶ್ರೀ ಶಿವಕುಮಾರ್ ಮಹಾಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ್ ಮಹಾಸ್ವಾಮಿಗಳು, ಶ್ರೀ ಸಿದ್ದ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಮಹದೇವ ಮಹಾರಾಜ್ ಸ್ವಾಮೀಜಿಗಳು ವೇದಿಕೆ ಕಾರ್ಯಕ್ರಮದಲ್ಲಿ ಮತ್ತು ಹೋರಾಟಕ್ಕೆ ಬೆಂಬಲ ನೀಡಿದರು.
ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ರೈತರು ಮಹಿಳೆಯರು ಸೇರಿದಂತೆ ರೈತಪರ ಸಂಘಟನೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ :ಅಲಿ ಮಕಾನದಾರ




