Ad imageAd image

 ಕಂದಗಲ್ಲ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ.

Bharath Vaibhav
 ಕಂದಗಲ್ಲ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ.
WhatsApp Group Join Now
Telegram Group Join Now

ಕಂದಗಲ್ಲ : ಬಾಗಲಕೋಟೆಯ, ಜಿಲ್ಲಾ ಬಾಲ ಭವನ , ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಬಾಲ ಭವನ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ನೆಡೆದ 9 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ನೆಡೆದ ಸೃಜನಾತ್ಮಕ ಕಲೆ, ಚಿತ್ರಕಲೆ, ಜೆಡೆ ಮಣ್ಣಿನ ಕಲೆ, ಕರಕುಶಲ ಕಲೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಸರಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಕು ಮಹೇಶ್ ಎಚ್ ಕರಡಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾನೆ.ಮುಂದೆ ರಾಜ್ಯ ಮಟ್ಟದಲ್ಲಿ ನೆಡೆಯುವ ಕಲಾಶ್ರೀ ಕಾರ್ಯಕ್ರಮ ಕ್ಕೆ ಅರ್ಹತೆ ಪಡೆದಿದ್ದಾನೆ.

ಆಯ್ಕೆಗೊಂಡ ವಿದ್ಯಾರ್ಥಿ ಹಾಗೂ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕ ಎಸ್ ಎಸ್ ಗೌಡರ ಗುರುಗಳನ್ನು ಶಾಲೆಯ ಗುರು ಬಳಗ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪತ್ರಕರ್ತ ವೀರೇಶ್ ಶಿಂಪಿ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

 

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!