Ad imageAd image

ಪ್ರೀತಿಸಿ ಮದುವೆಯಾದ ಅಣ್ಣಾ – ತಂಗಿ : ಮನೆಯವರ ವಿರೋಧಕ್ಕೆ ಯುವತಿ ಆತ್ಮಹತ್ಯೆಗೆ ಯತ್ನ

Bharath Vaibhav
ಪ್ರೀತಿಸಿ ಮದುವೆಯಾದ ಅಣ್ಣಾ – ತಂಗಿ : ಮನೆಯವರ ವಿರೋಧಕ್ಕೆ ಯುವತಿ ಆತ್ಮಹತ್ಯೆಗೆ ಯತ್ನ
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ : ಹದಿಹರೆಯದ ವಯಸ್ಸಿನಲ್ಲಿ ಪೋಷಕರಾದವರು ತಮ್ಮ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸದೆ ಹೋದರೆ ಇಂತಹ ಘಟನೆಗಳು ಸಂಭವಿಸುತ್ತವೆ.

ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಘಟನೆ ಒಂದು ನಡೆದಿದ್ದು, ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಯುವಕನ ಕುಟುಂಬಸ್ಥರು ಶಾಕ್ ನೀಡಿದ್ದಾರೆ.

ವರಸೆಯಲ್ಲಿ ನೀವು ಅಣ್ಣ-ತಂಗಿಯಾಗಬೇಕು ಎಂದು ತಿಳಿಸಿದ್ದಾರೆ. ಪ್ರೀತಿಸಿ ಮದುವೆಯಾಗಿ ಮನಗೆ ಬಂದ ಜೋಡಿಗೆ ಯುವಕನ ಮನೆಯವರು ಶಾಕ್‌ ಕೊಟ್ಟಿದ್ದಾರೆ.

ವರಸೆಯಲ್ಲಿ ನೀವಿಬ್ಬರು ಅಣ್ಣ-ತಂಗಿ ಆಗಬೇಕು, ಮದುವೆಗೆ ನಾವ್ ಒಪ್ಪಲ್ಲ ಅಂತ ಶಾಕ್ ಕೊಟ್ಟಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಮನೆಗೆ ಬಂದಾಗ ಯುವಕನ ಮನೆಯವರು ʻನೀವಿಬ್ಬರು ವರಸೆಯಲ್ಲಿ ಅಣ್ಣ ತಂಗಿ ಆಗಬೇಕು. ಇದು ತಪ್ಪು ನಿಮ್ಮ ಮದುವೆ ಸರಿ ಅಲ್ಲʼ. ಸಂಬಂಧಿಕರೆಲ್ಲಾ ಬೈಕೊಳ್ತಾರೆ.

ಅಂತ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಮನನೊಂದ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಅಂದಹಾಗೆ ಗೋಪಲ್ಲಿ ಗ್ರಾಮದ ನಿತಿನ್ (23) ಹಾಗೂ ಸುಕನ್ಯಾ (19) ಪ್ರೀತಿಸಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ದೇವಾಲಯವೊಂದರಲ್ಲಿ ಮದುವೆಯಾಗಿದ್ರು.

ಯುವಕ ಮತ್ತು ಯುವತಿ ಮನೆಗೆ ಬಂದಾಗ ಮನೆಯವರು ಕಂಗಾಲಾಗಿದ್ದಾರೆ ನೀವಿಬ್ಬರೂ ವರಸೆಯಲ್ಲಿ ಅಣ್ಣ ತಂಗಿ ಆಗಬೇಕು ಎಂದು ಇಬ್ಬರ ಮದುವೆ ವಿರೋಧ ವ್ಯಕ್ತಪಡಿಸಿದ್ದಾರೆ ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಸುಕನ್ಯ ನನಗೆ ಅದೇ ಯುವಕ ಬೇಕು ಎಂದು ಪಟ್ಟು ಹಿಡಿದಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!