Ad imageAd image

‘ಮಕ್ಕಳಲ್ಲಿನ ವಿವಿಧ ಸಾಮರ್ಥ್ಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ’

Bharath Vaibhav
‘ಮಕ್ಕಳಲ್ಲಿನ ವಿವಿಧ ಸಾಮರ್ಥ್ಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ’
WhatsApp Group Join Now
Telegram Group Join Now

————————————–ಕ್ಷೇತ್ರ ಸಮನ್ವಯಾಧಿಕಾರಿ ಆರ್ ಡಿ ಹಿರೇಮಠ ಅಭಿಪ್ರಾಯ  

ಮಲ್ಲಮ್ಮನ ಬೆಳವಡಿ, (ದೊಡವಾಡ): ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಆಯೋಜಿಸಲಾಗುವ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಮಕ್ಕಳಲ್ಲಿ ಅಡಗಿರುವ ವಿವಿಧ ಸಾಮರ್ಥ್ಯ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಬೈಲಹೊಂಗಲ ತಾಲೂಕು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಆರ್ ಡಿ ಹಿರೇಮಠ ಹೇಳಿದರು.
ಸಮೀಪದ ಬುಡರಕಟ್ಟಿ ಗ್ರಾಮದ ತಾರಾಮತಿ ಕನ್ನಡ ಕಾನ್ವೆಂಟ ಮಾದರಿ ಹಿರಿಯ ಶಾಲೆಯಲ್ಲಿ ಬೈಲಹೊಂಗಲ ಬಿಇಓ ಸಿಆರ್ಸಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸಿಆರ್‌ಪಿ ರವೀಂದ್ರ ತುರಮರಿ, ಬುಡಕರಕಟ್ಟಿ ಗ್ರಾಮದ ಪ್ರಮುಖರಾದ ಮಾಜಿ ಯೋಧ ಬಸನಗೌಡ ಪಾಟೀಲ, ಡಾ. ಸಿದ್ಧಾರೂಢ ಹುಲ್ಲೂರ, ಬಾಳಪ್ಪ ಶಿಬಸಣ್ಣವರ ಮಾತನಾಡಿದರು. ರಾಮಚಂದ್ರ ನಿಕ್ಕಮ್ಮನವರ, ಡಾ.ಎ.ಬಿ.ಪಾಟೀಲ, ಗುರು ಅಂಗಡಿ, ಚಂಬಣ್ಣ ಸವಟಗಿ, ಶಿವಪ್ಪ ಹಕಾರಿ, ಮಲ್ಲಯ್ಮ ಪೂಜೇರ, ಉಪಸ್ಥಿತರಿದ್ದರು. ತಾರಾಮಮತಿ ಸಂಸ್ಥೆ ಸಂಸ್ಥಾಪಕ ಎಸ್.ಎಚ್.ಪಾಟೀಲ ಸ್ವಾಗತಿಸಿದರು. ಶಿಕ್ಷಕರಾದ ಬಿ.ಎಮ್.ದೊಡಮನಿ ನಿರೂಪಿಸಿದರು. ಪಿ.ಆರ್.ಹೂಲಿ ವಂದಿಸಿದರು. ಬುಡರಕಟ್ಟಿ ಕ್ಲಸ್ಟರ್ ಎಲ್ಲ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸ್ಪರ್ಧಾರ್ಥಿಗಳು, ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು.

ಬುಡರಕಟ್ಟಿ ಗ್ರಾಮದಲ್ಲಿ ಕ್ಲಷ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಲೋತ್ಸವವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!