Ad imageAd image

ನಾಳೆ ಮೋದಿ ಉದ್ಘಾಟಿಸಲಿದ್ದ ತೈಲಸಂಗ್ರಹಣಾ ಘಟದಲ್ಲಿ ಭೀಕರ ಬೆಂಕಿ ಅವಘಡ 

Bharath Vaibhav
ನಾಳೆ ಮೋದಿ ಉದ್ಘಾಟಿಸಲಿದ್ದ ತೈಲಸಂಗ್ರಹಣಾ ಘಟದಲ್ಲಿ ಭೀಕರ ಬೆಂಕಿ ಅವಘಡ 
WhatsApp Group Join Now
Telegram Group Join Now

ಜೈಪುರ: ಪ್ರಧಾನಿ ನರೇಂದ್ರ ಮೋದಿ ನಾಳೆ ಮಂಗಳವಾರ ಉದ್ಘಾಟಿಸಲಿದ್ದ ತೈಲಸಂಗ್ರಹಣಾ ಘಟದಲ್ಲಿ ಭೀಕರ ಬೆಂಕಿ ಅವಘಡ ಸಂಭಿಸಿರುವ ಘಟನೆ ರಾಜಸ್ಥಾನದ ರಾಜಸ್ಥಾನದ ಬಲೋತ್ರಾದಲ್ಲಿ ನಡೆದಿದೆ.

ಭಾರತದ ಮೊದಲ ಸಮಗ್ರ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಸಂಕೀರ್ಣ ಘಟಕ ಇದಾಗಿದ್ದು, ಉದ್ಘಟನೆಗೆ ಒಂದು ದಿನ ಮೊದಲು ಅಂದರೆ ಇಂದು ಈ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಭಾರತದ ಮೊದಲ ಗ್ರೀನ್‌ಫೀಲ್ಡ್ ಇಂಟಿಗ್ರೇಟೆಡ್ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಅನಾವರಣಗೊಳಿಸಲಿದ್ದರು. ಈ ಯೋಜನೆಯು 79,450 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಂಡಿದೆ. ಇದು ಈ ಪ್ರದೇಶದ ಅತಿದೊಡ್ಡ ಕೈಗಾರಿಕಾ ಅಭಿವೃದ್ಧಿಗಳಲ್ಲಿ ಒಂದಾಗಿದೆ.

ಮಾಹಿತಿಯ ಪ್ರಕಾರ, ಬೆಂಕಿ ಕೆಲವೇ ಕ್ಷಣಗಳಲ್ಲಿ ತೀವ್ರಗೊಂಡಿದ್ದು ಆ ಪ್ರದೇಶದಲ್ಲಿದ್ದ ಕಾರ್ಮಿಕರು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿತು. ಈ ಘಟನೆಯ ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದರು. ಯಾವುದೇ ಗಾಯಗಳ ಬಗ್ಗೆ ವರದಿಗಳಾಗಿಲ್ಲ.

ತೈಲ ಸಂಸ್ಕರಣಾಗಾರದ ಕಚ್ಚಾ ತೈಲ ಬಟ್ಟಿ ಇಳಿಸುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಂಗಳವಾರ ಇಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಬೇಕಾಗಿತ್ತು. ಇದಕ್ಕೂ ಮುನ್ನ ಬೆಂಕಿ ಕಾಣಿಸಿಕೊಂಡಿರುವುದರಿಂದ ಘಟಕದೊಳಗೆ ಸಾಕಷ್ಟು ಅವ್ಯವಸ್ಥೆ ಉಂಟಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!