ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಂಜುನಾಥ್ ಮೆಡಿಕಲ್ ಮುಂದೆ ಇರುವ ದಿವೈಡರ್ ಮಧ್ಯದಲ್ಲಿ ಬೀದಿ ದೀಪದ ವಿದ್ಯುತ್ ಕಂಬಕ್ಕೆ ಬಸ್ ಟಚ್ ಆಗಿ ಬಸಿನ ಬಲಭಾಗದಲ್ಲಿ ಇರತಕ್ಕಂತಹ ತಗೂಡು ಸಂಪೂರ್ಣ ಜಕ್ಕನಗೊಂಡಿದೆ. ಸದ್ಯಕ್ಕೆ ಯಾರಿಗೂ ಏನು ಅಪಾಯವಾಗಿಲ್ಲ.
ಪಟ್ಟಣದಲ್ಲಿ ವನವೇ ರಸ್ತೆ ಇದ್ದರೂ ಕೂಡ ವಾಹನ ಸವಾರರು ನಿಯಮಗಳನ್ನು ಪಾಲಿಸದೆ ತಮಗೆ ಇಷ್ಟ ಬಂದ ಹಾಗೆ ರಸ್ತೆಯ ಮೇಲೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿ ಇತರ ಘಟನೆ ನಡೆದಿದೆ.
ಪೊಲೀಸರು ರಸ್ತೆಯ ಮೇಲೆ ಅಲ್ಲಿ ಇಲ್ಲಿ ವಾಹನ ನಿಲ್ಲಿಸುವುದರಿಂದ ವಾಹನ ಸವಾರರಿಗೆ ಸಾಕಷ್ಟು ಬಾರಿ ಅವರಿಗೆ ತಿಳಿಹೇಳಿ ಹಾಗೂ ಪೆನಾಲ್ಟಿ ಹಾಕಿದರೂ ಕುಡಾ ಸಾರ್ವಜನಿಕರು ಕ್ಯಾರೆ ಅಣ್ಣಲ್ದೆ ಬೈಕುಗಳು ನಿಲ್ಲಿಸುತ್ತಾರೆ .
ದಿವೈಡರ್ ಆಗಲಿ ಬೀದಿ ದೀಪದ ಕಂಬವಾಗಲಿ ವಾಹನ ಸವಾರರಿಗೆ ತೊಂದರೆಯಾಗದಂತೆ ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ ಹಾಗೂ ಶಾಸಕರು ಇದರ ಬಗ್ಗೆ ಇನ್ನು ಮುಂದಾದರೂ ಹೆಚ್ಚಿನ ಗಮನ ಹರಸುತ್ತಾರೋ ಅಥವಾ ಇಲ್ಲ ಎಂಬುದು ಕಾದು ನೋಡೋಣ
ವರದಿ: ಮಂಜುನಾಥ ಕಲಾದಗಿ