ಐನಾಪುರ : ಅಕ್ಷರ ಕಲಿಯುವುದು ಮಾತ್ರ ಶಿಕ್ಷಣವಲ್ಲ, ಶಿಸ್ತು ಮತ್ತು ಸಂಸ್ಕಾರ ಕಲಿಯುವುದು ನಿಜವಾದ ಶಿಕ್ಷಣ ಎಂದು ಕಾಗವಾಡ ತಹಸೀಲ್ದಾರ ರಾಜೇಶ ಬುರ್ಲಿ ಹೇಳಿದರು.
ಅವರು ಶುಕ್ರವಾರ ಐನಾಪುರ ಪಟ್ಟಣದ ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾದ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಅಕ್ಷರ ಕಲಿತವರು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು, ಆದರೆ ಶಿಸ್ತು ಮತ್ತು ಸಂಸ್ಕಾರ ಕಲಿತವರು ತಮ್ಮ ಭವಿಷ್ಯದ ಜತೆ ಇತರರಿಗೆ ಆದರ್ಶರಾಗುತ್ತಾರೆ. ನಾವು ಕಲಿತ ವಿದ್ಯೆ ಮತ್ತು ಸಂಸ್ಕಾರ ಮಾತ್ರ ಜೀವನದಲ್ಲಿ ಉಪಯೋಗಕ್ಕೆ ಬರುತ್ತವೆ. ದಿವಂಗತ ರವೀಂದ್ರ ಗಾಣಿಗೇರ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ಜ್ಞಾನದ ಜೊತೆಗೆ ಶಿಸ್ತು,ಸಂಸ್ಕಾರವನ್ನು ಕಲಿಸುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆ ಅಧ್ಯಕ್ಷ ಅರುಣ ಗಾಣಿಗೇರ ಮಾತನಾಡಿ ನಿರ್ದಿಷ್ಟ ಗುರಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಇಂದು ತಂದೆ, ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿಲ್ಲ. ಬದಲಾಗಿ ಮೋಬೈಲ್ ನೀಡುತ್ತಿದ್ದಾರೆ ಇದರಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಆದರೆ ನಮ್ಮ ಶಾಲೆಯಲ್ಲಿ ಕಡಿವಾಣ ಹಾಕಿದ್ದು, ಮಕ್ಕಳ ಕೈಗೆ ಮೋಬೈಲ್ ಕೊಡಬಾರದು ಎಂದು ಪ್ರತಿಯೊಬ್ಬ ಪಾಲಕರಿಗೆ ಮನವರಿಕೆ ಮಾಡಿದ್ದೇವೆ ಎಂದ ಅವರು ಶಿಕ್ಷಣ ಪ್ರತಿಯೊಬ್ಬ ಮಕ್ಕಳ ವೈಯಕ್ತಿಕ ಜೀವನವನ್ನು ಬದಲಾವಣೆ ಮಾಡುವ ಶಕ್ತಿ ಹೊಂದಿದೆ ಎಂದರು.
ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಾಯಪ್ಪ ಕುಡವಕ್ಕಲಗಿ ಸಂಸ್ಥೆಯು ನಡೆದು ಬಂದ ದಾರಿ ಹಾಗೂ ದಿವಂಗತ ರವೀಂದ್ರ ಗಾಣಿಗೇರ ಅವರು ಈ ಶಿಕ್ಷಣ ಸಂಸ್ಥೆಗೆ ಮಾಡಿರುವಂತಹ ತ್ಯಾಗ ಅಭಿವೃದ್ಧಿ ಕಾರ್ಯಗಳು ನಮಗೆ ದಾರಿದೀಪವಾಗಿವೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಗಳನ್ನು ನೀಡುತ್ತಿದ್ದೇವೆ. ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಡಾ.ವಿಜಯ ಮುತಾಲಿಕ, ಡಾ, ರಾಜೇಂದ್ರ ಗಣಿ, ಮಾತನಾಡಿದರು. ವೇದಿಕೆಯ ಮೇಲೆ ,ಅನುಪ ಶೆಟ್ಟಿ ಸುರೇಶ ಗಾಣಿಗೇರ, ಅಪ್ಪಾಸಾಬ ಚೌಗಲಾ ಶಿವಾನಂದ ಕಮತಗಿ, ರಾಮು ಪಾವಲಿ, . ಸಿದ್ದಪ್ಪ ಖಟಾವಿ, ಕಾಳಪ್ಪಾ ಬಡಿಗೇರ, ಮುಖ್ಯಾಧ್ಯಾಪಕ ಬಾಬುರಾವ ಮೋಳೆಕರ ಸೇರಿದಂತೆ ಇತರರು ಇದ್ದರು.
ಇ ಸಂದರ್ಭದಲ್ಲಿ ಶಾಲಾ ಮಕ್ಕಳ ವಿವಿಧ ಬಗೆಯ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ವರದಿ :ಮುರಗೇಶ ಗಸ್ತಿ
ಐನಾಪುರ ಶಾಂತಿ ಸಾಗರ ವಿದ್ಯಾಪೀಠ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
