ಮೊಳಕಾಲ್ಮೂರು:-ಸಿದ್ದಯ್ಯನ ಕೋಟೆ ಮಠವು ಕಾಯಕ ಮಾರ್ಗದಲ್ಲಿ ನಡೆಯುತ್ತಿದೆ ಬಸವಲಿಂಗ ಸ್ವಾಮೀಜಿ ಮಕ್ಕಳಿಗೆ ಉಚಿತ ಶಿಕ್ಷಣ ಅನ್ನದಾಸೋಹ ನಡೆಸುತ್ತಿರುವುದು ಮಾದರಿ ಕೆಲಸ.. ಗೃಹ ಸಚಿವ ಜಿ ಪರಮೇಶ್ವರ.
ಮೊಳಕಾಲ್ಮೂರು:-ಅಂಬೇಡ್ಕರ್ ಅವರ ಸಂವಿಧಾನದ ಪ್ರಥಮ ಪುಟದಲ್ಲಿ ಉಲ್ಲೇಖಿಸಿರುವುದು ಬಸವಣ್ಣ ಅವರ ವಚನದಲ್ಲಿರುವ ಮಾತುಗಳನ್ನು ಎಲ್ಲಾ ಕ್ಷೇತ್ರದಲ್ಲಿ ಜಾತಿ ಧರ್ಮ ಆಧಾರಿತ ವ್ಯವಸ್ಥೆ ಹೆಚ್ಚಳವಾಗುತ್ತಿದೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರು ಶೋಷಿತರು ದಲಿತರು ಇದು ನಮ್ಮ ದೇಶ ಎಂದು ಮನಸಾರೆ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಸಿದ್ದನ ಕೋಟೆಯಲ್ಲಿ ಶನಿವಾರ ವಿಜಯ ಮಹಾಂತೇಶ್ವರ ಶಾಖ ಮಠದಿಂದ ಹಮ್ಮಿಕೊಂಡಿದ್ದ ಗಡಿನಾಡು ಸಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದರು.
ಎಲ್ಲಾ ಕ್ಷೇತ್ರದಲ್ಲಿ ಜಾತಿ ಧರ್ಮ ಆಧಾರಿತ ವ್ಯವಸ್ಥೆ ಹೆಚ್ಚಳವಾಗುತ್ತಿದ್ದು ಇದಕ್ಕೆ ಸರ್ಕಾರದ ನಿಯಮಗಳ ಒತ್ತು ನೀಡಿವೆ, ಜಾತಿ ವ್ಯವಸ್ಥೆಯಿಂದ ಹೊರ ಬಂದಿರುವ ಬೇರೆ ದೇಶಗಳ ಅಭಿವೃದ್ಧಿ ಹೊಂದಿದ್ದು, ಇದನ್ನು ನಾವು ನೋಡಿ ಕಲಿಯಬೇಕಿದೆ, ನಮಗೆ ಪ್ರಸ್ತುತ ಬೇಕಿರುವುದು ಬಸವ ಭಾರತ ಸಿದ್ಧಾಂತ ಎಂದು ಹೇಳಿದರು.
ಸಿದ್ದಯ್ಯನ ಕೋಟೆ ಮಠವು ಕಾಯಕಮಾರ್ಗದಲ್ಲಿ ನಡೆಯುತ್ತಿದೆ ಅನಕ್ಷರಸ್ಥರಾಗಿರುವ ಬಸವಲಿಂಗ ಸ್ವಾಮೀಜಿ 300 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಮಾದರಿ ಕೆಲಸ ಶ್ರೀಮಠಕ್ಕೆ ನಮ್ಮ ಸಿದ್ದಾರ್ಥ ಸಂಸ್ಥೆಯಿಂದ 25 ಲಕ್ಷ ಸಹಾಯಧನ ನೀಡಲಾಗುವುದು ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್ ಸಮಯದಲ್ಲಿ ಈ ಮಠದ ಬಸವಲಿಂಗ ಸ್ವಾಮೀಜಿ ತಾವೇ ಕೃಷಿ ಮಾಡಿ 400 ಚೀಲ ಬತ್ತ ಬೆಳೆದು ಮಠದ ವಿದ್ಯಾರ್ಥಿಗಳಿಗೆ ಹಸಿವು ನೀಗಿಸಿದ್ದಾರೆ, ಇಂತಹ ಸರಳ ಮಠ ಸ್ವಾಮೀಜಿಗಳ ಅಗತ್ಯ ನಮಗೆ ಇದೆ ಬಸವಣ್ಣ ಅವರ ತತ್ವಗಳನ್ನು ಮಠ ಪಾಲಿಸುತ್ತಿರುವುದು ಇಂತಹ ಮಠ ಎಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್ ಆಂಜನೇಯ ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಹಾರ್ದಿಕ ಸೌಲಭ್ಯವಿಲ್ಲದೆ ಸಿದ್ದೇನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಕಾಯಕದಿಂದಲೇ ಮಠವನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಇದು ವಿಜಯ ಮಹಂತ ಮಠದ ಹೆಮ್ಮೆ ಎಂದು ಇಳೇಕಲ್ ವಿಜಯ ಮಹಾಂತ ಗುರು ಮಹಾಂತ ಸ್ವಾಮೀಜಿ ಹೇಳಿದರು.
ಇದೇ ಸಂದರ್ಭದಲ್ಲಿ ಸಿದ್ದನಕೋಟೆ ಮಹಾಂತ ಸ್ವಾಮೀಜಿ ಮಾತನಾಡಿ
ದುಶ್ಚಟಗಳನ್ನು ಬಿಡಿಸುವ ನಿಟ್ಟಿನಲ್ಲಿ ನಾಲ್ಕು ದಶಕಗಳ ಕಾಲ ರಾಜ್ಯದ್ಯಂತ ಜಾಗೃತಿ ಮೂಡಿಸಿದ ಇಳಕಲ್ ಮಹಾಂತಪ್ಪ ಅವರ ಜನ್ಮದಿನವನ್ನು ಸರ್ಕಾರದಿಂದ ದುಶ್ಚಟಗಳನ್ನು ಬಿಡುವ ಮುಕ್ತ ದಿನವಾಗಿ ಆಚರಿಸಲಾಗುತ್ತಿದೆ, ಅವರಿಗೆ ಕರ್ನಾಟಕ ರತ್ನ ನೀಡುವ ಮೂಲಕ ಗೌರವಿಸಬೇಕು, ಗೃಹ ಸಚಿವರು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಬೇಕು ಎಂದು ಮಠದ ಬಸವಲಿಂಗ ಸ್ವಾಮೀಜಿ ಮನವಿ ಮಾಡಿದರು, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ಈ ಮಠವನ್ನು ಕಟ್ಟಿ ಬೆಳೆಸುತ್ತಿರುವುದು ಸಂತೋಷದ ವಿಚಾರ ಎಂದು ಆನಂದ ಭಾಷ್ಪವನ್ನು ಸುರಿಸಿದರು.
ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮಹಾಂತ ಗುರು ಕಾರುಣ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ , ಗುಳಿದ ಗುಡ್ಡ ಬ್ರಹ್ಮನ ಮಠದ ಗುರುಸಿದ್ಧ ಪಟ್ಟಾಧರ್ಯಾ ಸ್ವಾಮೀಜಿ, ಮಠದ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು,
ಈ ಸಂದರ್ಭದಲ್ಲಿ ಚಿತ್ರದುರ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ ಕೆ ತಾಜ್ಮೀರ್, ಕೆಪಿಸಿಸಿ ಸದಸ್ಯ ಜಿಜೆ ಹಟ್ಟಿ ತಿಪ್ಪೇಸ್ವಾಮಿ, ಲಿಡ್ಕರ್ ಮಾಜಿ ಅಧ್ಯಕ್ಷ ಓ ಶಂಕರ್, ಮುಖಂಡರಾದ ಪಟೇಲ್ ಜಿ ಪಾಪ ನಾಯಕ್, ಎಸ್ ಜಯಣ್ಣ ಟಿ ಕೆ ಕಲಿ ಮುಲ್ಲಾ, ಶ್ರೀಮಠದ ಕಾರ್ಯದರ್ಶಿ ಪಿಆರ್ ಕಾಂತರಾಜ್, ಕೆಳವಾದಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ್, ಶಿಕ್ಷಕ ಕೆ ಒ ಶಿವಣ್ಣ, ನೂರಾರು ವಿದ್ಯಾರ್ಥಿಗಳು ಇನ್ನೂ ಹಲವರು ಉಪಸ್ಥಿತರಿದ್ದರು.
ಪಿಎಂ ಗಂಗಾಧರ್