ಬೆಂಗಳೂರು : ಪೆಹಲ್ಗಮ್ ಉಗ್ರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ಏರ್ ಸ್ಟ್ರೈಕ್ ನಡೆಸಿದ್ದು, ಉಗ್ರ ಸೇನೆಯ ಪರಾಕ್ರಮವನ್ನು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
‘ಆಪರೇಷನ್ ಸಿಂಧೂರ್ ‘ ಬಗ್ಗೆ ಮಾತಾಡುವ ವೇಳೆ ಸಿಎಂ ಸಿದ್ದು ಹಣೆಗೆ ಕುಂಕುಮ ಇಟ್ಟು ಮಾತಾಡಿದ್ದು ಎಲ್ಲರ ಗಮನಸೆಳೆದಿದೆ.
ಇದೇ ವಿಚಾರವನ್ನು ಭಾರತೀಯ ಜನತಾ ಪಾರ್ಟಿ ಪೋಸ್ಟ್ ಮೂಲಕ ವ್ಯಂಗ್ಯವಾಡಿದ್ದು, ಯುದ್ಧವೇ ಬೇಡ ಅಂದವರು,ಇಂದು ಹಣೆಗೆ “ಸಿಂಧೂರ” ಇಟ್ಟು ಕುಳಿತು ಮಾತಾಡಿದ್ದಾರೆ ಎಂದು ಫೋಟೋ ಶೇರ್ ಮಾಡಿ ಪೋಸ್ಟ್ ಮಾಡಿದೆ.
ಸಾಮಾನ್ಯವಾಗಿ ಆಸ್ತಿಕತೆಯಿಂದ ದೂರವಿರುವ ಸಿಎಂ ಹಣೆಗೆ ಕುಂಕುಮ ಇಟ್ಟು ಭಾರತೀಯ ಸೇನೆಯ ಪೌರುಷವನ್ನು ಹಾಡಿ ಹೊಗಳಿದ್ದಾರೆ. ಸಿದ್ದು ಕುಂಕುಮ ಇಟ್ಟು ಮಾತಾಡಿರುವ ಫೋಟೋಗಳು ಎಲ್ಲೆಡೆ ತೀವ್ರ ಚರ್ಚೆ ಹುಟ್ಟುಹಾಕಿದೆ