Ad imageAd image

ಅಡ್ಮಿಷನ್ ಮಾಡಿಕೊಳ್ಳಲು ಲಂಚ :  ಮುಖ್ಯೋಪಾಧ್ಯಯನ ಬಂಧನ

Bharath Vaibhav
ಅಡ್ಮಿಷನ್ ಮಾಡಿಕೊಳ್ಳಲು ಲಂಚ :  ಮುಖ್ಯೋಪಾಧ್ಯಯನ ಬಂಧನ
WhatsApp Group Join Now
Telegram Group Join Now

ಹಾವೇರಿ:  ಜಿಲ್ಲೆಯ ಸವಣೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ ನಿನ್ನೆ ಹಾವೇರಿಯ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಿನ್ನೆ ನಡೆದಿದೆ.
ಪೀರಿಯಾದಾರರಾದ ಅಕ್ಬರ್ ತಂದೆ ಅಬ್ದುಲ್ ಹಮೀದ್ ಕಂದಿಲ್ವಾಲೆ ಸಾ. ಖಾದರ್ಬಾಗ್ ಓಣಿ ಸವಣೂರು. ಇವರು ತಮ್ಮ ಎರಡನೇ ಮಗನ ಅಡ್ಮಿಷನ್ ಮಾಡಿಸಲು ದಿನಾಂಕ ೧೬/೦೫/೨೫ ರಂದು ಆಪಾದಿತ ಮಂಜುನಾಥ್ ಕಲ್ಲಪ್ಪ ಕಾಟೇನಹಳ್ಳಿ ಮುಖ್ಯೋಪಾಧ್ಯಾಯರು ಕರ್ನಾಟಕ ಪಬ್ಲಿಕ್ ಶಾಲೆ ಸವಣೂರು ಇವರನ್ನು ಬೇಟಿ ಆಗಿದ್ದು ಸದಿರಿಯವರು ಅಡ್ಮಿಷನ್ ಮಾಡಿಕೊಳ್ಳಲು ೫೦೦೦ ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು ರೂಪಾಯಿ ೧೦೦೦೦ ಗಳಿಗೆ ಒಪ್ಪಿಕೊಂಡಿದ್ದು ಅದರಲ್ಲಿ ದಿನಾಂಕ ೧೭/೦೫/೨೫ ರಂದು ೫೦೦೦ ಗಳನ್ನು ಮುಂಗಡವಾಗಿ ಸ್ವೀಕರಿಸಿಕೊಂಡು ಅದರಲ್ಲಿ ಉಳಿದ ೫೦೦೦ ಗಳನ್ನೂ ೧೯/೦೫/೨೫ ಪೀರಿಯಾದಾರರಿಂದ ಲಂಚದ ಹಣವನ್ನು ಪಡೆದುಕೊಳ್ಳುವಾಗ ಸವಣೂರು ನಗರದ ಹಾವನಗಿ ಪ್ಲಾಟ್ ನಲ್ಲಿರುವ ಆಪಾದಿತ ಮನೆಯಲ್ಲಿ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ ಹಾಗೆ ಸದರಿ ಪ್ರಕರಣದ ತನಿಖೆಯನ್ನು ಎಂ ಎಸ್ ಕೌಲಾಪುರೆ ಪೊಲೀಸ್ ಅಧೀರಿಕ್ಷಕರು ಕಲೋ ದವನಗೇರಿರವರ ಮಾರ್ಗದಲ್ಲಿ ಕೈಗೊಂಡು ಹಾಗೆ ಮಧುಸೂದನ್ ಸಿ ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತ ನೇತೃತ್ವದಲ್ಲಿ ತನಿಖಾದಿಕಾರಿಗಳಾದ ಮಂಜುನಾಥ್ ಪಂಡಿತ್ ಪಿ ಏನ್ ಹಾಗೆ ಬಸುವರಾಜ್ ಹಳಬನ್ನವರ್ ಪೊಲೀಸ್ ನಿರೀಕ್ಷಕರು.

ದದಾವಲಿ ಕೇ ಹೆಚ್ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಸಿ ಎಂ ಬಾರ್ಕಿ ಎಂ ಕೆ ನದಾಪ್ ಬಿ ಎಸ್ ಕರ್ಜಗಿ ಎಂ ಕೆ ಲಕ್ಷ್ಮೇಶ್ವರ ಆನಂದ ತಳಕಲ್ ಎಸ್ ಎನ್ ಕಡಕೋಳ ಮಂಜುನಾಥ್ ಬೀ ಏಲ್ ರಮೇಶ್ ಗಜ್ಜಿಹಳ್ಳಿ ಶಿವರಾಜ್ ಲಿಂಗಮ್ಮನವರ್ ಆನಂದ ಶೆಟ್ಟರ್ ಬೀ ಎಸ್ ಸಂಕಣ್ಣವರ್ ಮಾಹಂತೇಶ್ ಎಸ್ ಕೊಂಬಳಿ ಹೀಗೆ ಈ ಎಲ್ಲ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಹಾಗೆ ಸದರಿ ಆರೋಪಿತನನ್ನ ದಸ್ತಗಿರಿ ಮಾಡಿದ್ದು ತನಿಖೆ ಮಂದುವರಿದೆ ಎಂದು ಹಾವೇರಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ: ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!