Ad imageAd image

ಚಿಂಚಲಿ ತಾಯಿ ಮಾಯಕ್ಕಾ ದೇವಿಯ ಜಾತ್ರೆ ಇವತ್ತಿನಿಂದ ಒಂದು ತಿಂಗಳದವರೆಗೆ ಅದ್ದೂರಿ ಪ್ರಾರಂಭ

Bharath Vaibhav
ಚಿಂಚಲಿ ತಾಯಿ ಮಾಯಕ್ಕಾ ದೇವಿಯ ಜಾತ್ರೆ ಇವತ್ತಿನಿಂದ ಒಂದು ತಿಂಗಳದವರೆಗೆ ಅದ್ದೂರಿ ಪ್ರಾರಂಭ
WhatsApp Group Join Now
Telegram Group Join Now

ರಾಯಬಾಗ : ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಮಾಯಕ್ಕಾ ದೇವಿಯ ಜಾತ್ರೆ ಇವತ್ತಿನಿಂದ ಒಂದು ತಿಂಗಳದವರೆಗೆ ಅತಿ ಅದ್ದೂರಿಯಾಗಿ ಪ್ರಾರಂಭಿಸಲಾಗುತ್ತಿದೆ.

ಮಾಯಕ್ಕಾ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಜಿತೇಂದ್ರ ಜಾದವ್ ದಾದಾ ಅವರ ನೇತೃತ್ವದಲ್ಲಿ ಈ ಜಾತ್ರೆಯ ಸಮಾರಂಭ ಪೂರ್ಣಗೊಳ್ಳಲಿದೆ ಅವರು ನಮ್ಮ ವಾಹಿನಿಯೊಂದಿಗೆ ಮಾತನಾಡಿದರು

ಬೈಟ್ ಜಿತೇಂದ್ರ ಜಾದವ್ ದಾದಾ ಅಧ್ಯಕ್ಷರು ಚಿಂಚಲಿ.

ಈ ಜಾತ್ರೆ ಒಂದು ತಿಂಗಳದ ವರೆಗೆ ನಡೆಯಲಿದ್ದು ಈ ಜಾತ್ರೆಗೆ ಮಹಾರಾಷ್ಟ್ರ ಗೋವಾ ತಮಿಳುನಾಡು ಕರ್ನಾಟಕ ಹಲವು ರಾಜ್ಯಗಳಿಂದ ಸುಮಾರು 15 ರಿಂದ 20 ಲಕ್ಷ ಭಕ್ತಾದಿಗಳು ಭಕ್ತಾದಿಗಳು ಬರಲಿದ್ದಾರೆ ಎಂದು ತಿಳಿಸಿದರು.

ಜಾತ್ರೆಯ ಪ್ರಾರಂಭದಿಂದ ಮುಗಿಯುವವರೆಗೆ ಬೇಕಾಗುವ ಸಕಲ ಸೌಲಭ್ಯಗಳನ್ನು ಜಾತ್ರೆಯ ಟ್ರಸ್ಟ್ ಕಮಿಷ್ಠಿಯವರು ಪೂರೈಸಲು ಸದಾ ಸಿದ್ಧರಿದ್ದಾರೆ ಎಂದು ತಿಳಿಸಿದರು.

ಈ ಜಾತ್ರೆಲಿ ಲಕ್ಷಾಂತರ ಭಕ್ತಾದಿಗಳು ಇರುವುದರಿಂದ ಏಡಿಷನಲ್ ಎಸ್ ಪಿಯಾದ ಶ್ರೀ ಬಸ್ಸರಗಿ ಅವರ ನೇತೃತ್ವದಲ್ಲಿ ಡಿಎಸ್ಪಿ, ಸಿಪಿಐ, ಪಿಎಸ್ಐ, ಮತ್ತು 600 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಹಾಗೂ ಕಾನಸ್ಸಟೆಬಲ್ ಇವರ ಉಪಸ್ಥಿತಿಯಲ್ಲಿ ಯಾವುದೇ ಆಹಿತಕರಕ ಘಟನೆ ನಡೆದಂತೆ ಕಾವಲು ಮಾಡಲಾಗುವುದು ಎಂದು ತಿಳಿಸಿದರು.

ಚಿಂಚಲಿ ಪಟ್ಟಣ ಪಂಚಾಯಿತಿ ವತಿಯಿಂದ ಕುಡಿಯಲು ನೀರು, ರಸ್ತೆಗಳು, ಸ್ವಚ್ಛತೆ ಹಾಗೂ ಇನ್ನಿತರ ಎಲ್ಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿಯವರು ಜಾತ್ರೆಯಲ್ಲಿ ಬೇಕಾಗುವ 24 ಗಂಟೆಗಳಿಗಾಗಿ ಲೈಟಿಂಗ್ ವ್ಯವಸ್ಥೆಗಳನ್ನು ಪೂರೈಸಲು ಆದೇಶಿಸಿದ್ದಾರೆ ಎಂದು ಹೇಳಿದರು.

ಮಾಯಕ್ಕಾ ದೆವಿಯ ಟ್ರಸ್ಟ್ ಕಮಿಟಿಯ ಮುಖ್ಯಸ್ಥರು ನಮ್ಮೊಂದಿಗೆ ಮಾತನಾಡಿ ಇಲ್ಲಿ ಬರುವಂತ ಭಕ್ತರಿಗೆ ಯಾವುದು ತೊಂದರೆ ಆಗದಂತೆ ನಾವು ಕಮಿಟಿಯರು 24 ಗಂಟೆಗಳು ಅವರೊಂದಿಗೆ ಸ್ಪಂದಿಸಲು ಸಿದ್ಧರಾಗಿದ್ದೇವೆ ಮತ್ತು ಈ ವರ್ಷ ಭಕ್ತಾದಿಗಳಿಗೆ ಬರಲು ಹೊಸ ದಾದ ಬ್ರಿಜ್ ಪ್ರಾರಂಭವಾಗಿದೆ ಎಂದರು.

ಬರುವ ಹಲವು ಭಕ್ತರು ಎಲ್ಲ ಭಕ್ತರಿಗೆ ಸಿಹಿ ಪ್ರಸಾದ ಪೂರೈಸಲು ಮುಂದಾಗಿದ್ದರೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮೆಡಿಕಲ್ ವ್ಯವಸ್ಥೆ ಇನ್ನಿತರ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಕಮಿಟಿಯ ಮುಖ್ಯಸ್ಥರಾದ ಸುಧಾಕರ್ ಪಾಟೀಲ್, ಹಾಗೂ ಸಂಜು ಸಿಂಧೆ, ಇವರು ಮಾತನಾಡಿ ಭಕ್ತರಿಗೆ ಬೇಕಾಗುವ ಅನುಕೂಲಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ದೇವಲ ಬಾಗಿ , ರವೀಂದ್ರ ಪಚ್ಚೆಕರಿ, ಸಜಿತ್ ಪೂಜೇರಿ, ಅಂಕುಶ್ ಜಾಧವ್, ಭರತೇಶ್ ಧೆಮನನ್ನವರ್, ಲಕ್ಷ್ಮಣ್ ಕರಾಕಾಯಿ, ಹಾಗೂ ಕಮಿಟಿಯ ಎಲ್ಲಾ ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!