ಯಮಕನಮರಡಿ :ನಿನ್ನೆ ಸಚಿವ ಸತೀಶ ಜಾರಕಿಹೊಳಿ ಅವರ ಆದೇಶದ ಮೇರಗೆ ಅವರ ಆಪ್ತರಾದ ಮಲಗೌಡ ಪಾಟೀಲ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿಲ್ಲಾ ಪಂ ವ್ಯಾಪ್ತಿಯಲ್ಲಿ ಬರುವ ದೇವಗಿರಿ ಗ್ರಾಮದಲ್ಲಿ ಲಿಂಗಾಯತ ಸಮಾಜದ ಸ್ಮಶಾನಭೂಮಿಯನ್ನು ಕಬಳಿಸಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಗಿರಿ ಗ್ರಾಮಸ್ಥರು ಸ್ಮಶಾನಭೂಮಿಯಲ್ಲೇ ಪ್ರತಿಭಟನೆ ನಡೆಸುತ್ತಿದ ಸ್ಥಳಕ್ಕೆ ತಕ್ಷಣ ಭೇಟೀ ನೀಡಿ ಗ್ರಾಮಸ್ಥರ ಜೊತೆ ಮಾತನಾಡಿ, ದೇವಗಿರಿ ಗ್ರಾಮದ ಸರ್ವೇ ನಂ 123/8ರಲ್ಲಿ ಬರುವ 1 ಎಕರೆ 16 ಗುಂಟೆಯ ಭೂಮಿಯನ್ನು ಲಿಂಗಾಯತ ಸಮಾಜದ ಜನರಿಗೆ ಸ್ಮಶಾನಕ್ಕೆ ಮೀಸಲಾಗಿತ್ತು.
ಕಳೆದ ಸುಮಾರು ವರ್ಷಗಳಿಂದ ದೇವಗಿರಿ ಗ್ರಾಮದ ಜನರು ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಈ ಜಾಗ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಪಡೆದು ಆದಷ್ಟು ಬೇಗ ಸ್ಮಶಾನದ ಭೂಮಿಯನ್ನು ಗ್ರಾಮದ ಜನರಿಗೆ ಅನುಕುಲ ಮಾಡಿಕೊಡುದ್ದಾಗಿ ಬರವಸೆ ನೀಡಿದರು.
ವರದಿ: ರಾಜು ಮುಂಡೆ