Ad imageAd image

ಸಿಎಂ ಕುರ್ಚಿಯ ನಟ್ಟು ಬೋಲ್ಟು ಕಳಚುವುದರಲ್ಲಿ ಡಿಕೆಶಿ ಹೆಚ್ಚು ಆಸಕ್ತ : ಬಿಜೆಪಿ ಟ್ವೀಟ್ 

Bharath Vaibhav
ಸಿಎಂ ಕುರ್ಚಿಯ ನಟ್ಟು ಬೋಲ್ಟು ಕಳಚುವುದರಲ್ಲಿ ಡಿಕೆಶಿ ಹೆಚ್ಚು ಆಸಕ್ತ : ಬಿಜೆಪಿ ಟ್ವೀಟ್ 
WhatsApp Group Join Now
Telegram Group Join Now

ಬೆಂಗಳೂರು : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಾರದ ಹಲವು ನಟ-ನಟಿಯರ ನಲ್ಟು-ಬೋಲ್ಟು ಹೇಗೆ ಟೈಟ್​ ಮಾಡಬೇಕೆಂಬುವುದು ನನಗೆ ಗೊತ್ತಿದೆ ಎಂದು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ವಾರ್ನಿಂಗ್ ಎಂಬಂತೆ ಹೇಳಿಕೆ ನೀಡಿದ್ದರು.

ಈ ಹೇಳಿಕೆ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದ್ದಲ್ಲದೇ, ಡಿಕೆಶಿ ಅವರ ಅದೇ ಹೇಳಿಕೆಯನ್ನೇ ಮುಂದಿಟ್ಟು ಬಿಜೆಪಿ ಇದೀಗ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

ನಟ್ಟು-ಬೋಲ್ಟು ಟೈಟ್‌ ಮಾಡುವುದರಲ್ಲಿ ನಿಸ್ಸೀಮರಾಗಿರುವ ಡಿಸಿಎಂ ಅವರು, ಸಿಎಂ ಸಿದ್ದರಾಮಯ್ಯ ಕುರ್ಚಿಯ ನಟ್ಟು ಬೋಲ್ಟುಗಳನ್ನು ಕಳಚುವುದರಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಅಕ್ಟೋಬರ್-ನವೆಂಬರ್‌ ಅಂತ್ಯಕ್ಕೆ ಹಾಲಿ ಸಿಎಂ ಸಿದ್ದರಾಮಯ್ಯ ಅವರ ಗದ್ದುಗೆಯ ಎಕ್ಸ್​​​​ಪೈರಿ ಡೇಟ್​​ ಮುಗಿಯಲಿದ್ದು, ಆ ಸ್ಥಾನಕ್ಕೆ ಹೊಂಚು ಹಾಕಿರುವ ಡಿಕೆಶಿ ಅವರು ಈಗಿನಿಂದಲೇ ಸಿದ್ದರಾಮಯ್ಯ ಅವರ ಕುರ್ಚಿಯ ನಟ್ಟು-ಬೋಲ್ಟುಗಳನ್ನು ಲೂಸ್‌ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಕಮಲಪಡೆ ಛೇಡಿಸಿದೆ.

WhatsApp Group Join Now
Telegram Group Join Now
Share This Article
error: Content is protected !!