ಬಳ್ಳಾರಿ : ಕಂಪ್ಲಿ ತಾಲೂಕಿನ ರಾಮಸಾಗರದ ಸರ್ ಸಿವಿ ರಾಮನ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ ಅನುಮೀಯ ಮುಕ್ತಿ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮಕ್ಕೆ ಡಾಕ್ಟರ್ ಅರುಣ್ ಕುಮಾರ್ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಿದರು ನಂತರ ಡಾಕ್ಟರ್ ಅರುಣ್ ಕುಮಾರ್ ಅವರ ಮಾತನಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಆರೋಗ್ಯ ತಪಾಸಣೆ, ತಿಂಗಳಿಗೊಮ್ಮೆ ನಡೆಸಬೇಕು. ಮಕ್ಕಳಿಗೆ ಏನಾದರೂ ಸಮಸ್ಯೆ ಉಂಟಾದಲ್ಲಿ ನಮ್ಮ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಆ ಮಕ್ಕಳಿಗೆ ನಾವು ಹೆಚ್ಚಿನ ಚಿಕಿತ್ಸೆ ನೀಡುತ್ತೇವೆ ಎಂದು ಡಾಕ್ಟರ್ ಅರುಣ್ ಕುಮಾರ್ ಅವರು ಮಾಹಿತಿ ತಿಳಿಸಿದರು.
ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಪ್ರಯುಕ್ತ ಒಂದನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ರಾಜ್ಯಾದ್ಯಂತ ಶಾಲೆಯ ಮಕ್ಕಳಿಗೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪರೀಕ್ಷೆಯ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಇಂದು ರಾಮಸಾಗರ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿಡಾ. ಅರುಣ್ ತಾಲೂಕ ಆರೋಗ್ಯ ಅಧಿಕಾರಿಗಳು ಗಿರೀಶ್ DNO ಬಳ್ಳಾರಿ ಜಿಲ್ಲಾ RCH ಕಚೇರಿ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಪ್ರಶಾಂತ್ ಕುಮಾರ್ ಪಿ ಬಸವರಾಜ ಶಾಲೆಯ ಮುಖ್ಯ ಗುರುಗಳಾದ Hc ರಾಮಕೃಷ್ಣ ಹಾಗೂ ರೇಖಾ cho ಜ್ಯೋತಿ nursing officer and ಆಶಾ ಕಾರ್ಯಕರ್ತರು ಹಾಜರಿದ್ದರು.