ಮಲ್ಲಮ್ಮನ ಬೆಳವಡಿ: ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ವಲಯದ ಚಿಕ್ಕ ಬೆಳ್ಳಿಕಟ್ಟಿ ಕಾರ್ಯಕ್ಷೆತ್ರದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಸ್ವಾಗತಿಸಿದರು ತಾಲೂಕಿನ ಕೃಷಿ ಮೇಲ್ವಿಚಾರಕರು ಪರಿಸರ ಬಗ್ಗೆ ಪ್ರಾಸ್ತಾವಿಕೆ ಮಾತನಾಡಿದರು.
ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಗುರುಗಳು ಪರಿಸರ ರಕ್ಷಣೆ ನಮ್ಮೆಲ್ಲರ ಗುರಿ.ಮುಂದಿನ ಪೀಳಿಗೆಗೆ ನಾವು ಏನಾದ್ರು ಕೊಡುಗೆ ಕೊಡುವುದಾದರೆ ಉತ್ತಮ ಪರಿಸರ ಕೊಟ್ಟರೆ ಮಾತ್ರ ನಮ್ಮ ಜೀವನ ಸಾರ್ಥಕ ಎಂದು ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಹಾಗೂ ಶಾಲೆಯ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
ವರದಿ: ದುಂಡಪ್ಪ ಹೂಲಿ