ಐನಾಪುರ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಸರಕಾರ ಹಣದಲ್ಲಿ ಅಧ್ಯಯನಕ್ಕೆ ಹೊರಟಿರುವುದಾಗಿ ಕೇಳಿ ಬರುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು.
ಅವರು ಶನಿವಾರ ಶೇಡಬಾಳ ಪಟ್ಟಣದ ಕಲ್ಲಾಳದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಸುಮಾರು 1.5 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬಾಂಧಾರ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಕುಂಭ ಮೇಳಕ್ಕೆ ವೈಯಕ್ತಿಕವಾಗಿ ತಮ್ಮ ಇಚ್ಚೆ ಅನುಸಾರ ಹೋಗಿ ಬರುತ್ತಿದ್ದಾರೆ ಆದರೆ ನಾವು ಸರಕಾರದಿಂದ ಶಾಸಕರು ಕುಂಭ ಮೇಳಕ್ಕೆ ಹೊಗುತ್ತಿರವುದಾಗಿ ಕೆಲ ಮಾಧ್ಯಮಗಳಲ್ಲಿ ನೋಡಿದ್ದೇನೆ ಇದು ಶುದ್ದ ಸುಳ್ಳು ಇದು ವಿರೋದ ಪಕ್ಷದ ಆರೋಪ ಇದರಲ್ಲಿ ಹುರುಳ ಇಲ್ಲಾ ಎಂದು ಹೇಳಿದರು.
ಬಸವೇಶ್ವರ ಯಾತ ನೀರಾವರಿ ಯೋಜನೆಗೆ 300 ಕೋಟಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದ್ದು ಅದಕ್ಕೆ ಒಪ್ಪಿಗೆ ನೀಡಲಾಗಿದೆ ಈಗಾಗಲೇ ಒಂದು ಮೋಟಾರನ್ನು ಪ್ರಾಯೋಗಿಕವಾಗಿ ಚಾಲನೆ ನೀಡಿ ನೀರು ಹರಿಸಲಾಗಿದೆ ಬರುವ ಜೂನ ನಲ್ಲಿ ಎಲ್ಲ ಐದು ಮೋಟಾರಗಳನ್ನು ಪ್ರಾರಂಭಿಸಿ ಆ ಭಾಗದ ಸುಮಾರು 27 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಿ ರೈತರಿಗೆ ಅನುಕೂಲ ಮಾಡಲಾಗುವುದು ಅದರಂತೆ ಇದೆ ಬರುವ ಫೆ. 22 ಶನಿವಾರ 160 ಕೋಟಿ ವೆಚ್ಚದಲ್ಲಿ ಮತ ಕ್ಷೇತ್ರದ 13 ಕೆರೆ ತುಂಬುವ ಯೋಜನೆಗೆ ನಾನು ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಕೂಡಿಕೊಂಡು ಗುಂಡೇವಾಡಿ,ಪಾರ್ಥನಳ್ಳಿ,ಅನಂತಪೂರ,ಬ್ಯಾಡರಟ್ಟಿ,ಬಳ್ಳೀಗೇರಿ,ಮಲಾಬಾದ,ಬೇವನೂರ,ಗ್ರಾಮಗಳ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಲಾಗುವುದ ಮತ್ತು 24 ಕೋಟಿ ವೆಚ್ಚದಲ್ಲಿ ಕಾಗವಾಡ,ಕೆಂಪವಾಡ,ಲೋಕುರ,ಮಂಗಸೂಳಿ,ಶೇಡಬಾಳ ಗ್ರಾಮಗಳ 6 ಕೆರ ತುಂಬುವ ಯೋಜನೆ ಟೆಂಡರ್ ಕರೆಯಲಾಗಿದೆ ಅದನ್ನು ಕೂಡಾ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ಸಣ್ಣ ನೀರಾವರಿ ಅಧಿಕಾರಿಗಳಾದ ಸಾಗರ ಪವಾರ,ಸಚೀನ ಮಾಳಿ, ಅಶೋಕ ರತ್ನಪ್ಪಗೋಳ,ದಾದಾ ಬಣಜವಾಡ ಪ್ರಕಾಶ ಮಾಳಿ, ಅಣ್ಣಾಅರವಾಡೆ ,ಪ್ರಕಾಶ ಮಗದುಮ್ಮ,ವಸಂತ ಖೋತ,ಸೇರಿದಂತೆಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ:ಮುರಗೇಶ ಗಸ್ತಿ