ಲಿಂಗಸ್ಗೂರು : ಹಟ್ಟಿ ಸಮೀಪವಿರುವ ಕೋಠಾ ಗ್ರಾಮ ಪಂಚಾಯತಿ ಪಿಡಿಓ ಗಂಗಮ್ಮ ಇವರನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಪಡೆವ್ ಅಮಾನತ್ತು ಆದೇಶ ಹೊರಡಿಸಿದ್ದಾರೆ.
2024 -25 ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳ ಸೇರಿ 26,71, 303 ಮೊತ್ತದ ಅನುದಾನ ದುರುಪಯೋಗಪಡಿಸಿಕೊಂಡ ಮೇರೆಗೆ ಅಧಿಕಾರಿಗಳು ತನಿಖೆ ನಡೆಸಿದ್ದರು.
ಕೋಠಾ ಗ್ರಾಮ ಪಂಚಾಯತ್ ಪಿಡಿಒ ಗಂಗಮ್ಮ ಅವರನ್ನು ಕಾನೂನು ಬಾಹಿರ ಮಾರ್ಗಸೂಚಿ ಉಲ್ಲಂಘಿಸಿರುವುದನ್ನು ಕಂಡುಬಂದು ಸೇವೆಯಿಂದ ವಜಗೊಳಿಸಿದ್ದಾರೆ.
ಹಣ ದುರ್ಬಳಕೆ ಆರೋಪ: ಕೋಠಾ ಪಿಡಿಒ ಗಂಗಮ್ಮ ಅಮಾನತು
