———-ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಕ್ ಅಭಿಮತ
ನಿಪ್ಪಾಣಿ: ಸರ್ಕಾರಿ ಶಾಲೆಗಳಲ್ಲಿಯ ಹಾಜರಾತಿ ಹೆಚ್ಚಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಅರಿವು ಮೂಡಿಸಲು ರಾಜ್ಯಾದ್ಯಂತ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಕೈಗೊಂಡಿದ್ದು ಸರ್ಕಾರಿ ಶಾಲೆಯಲ್ಲಿಯ ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ದಿಗೆ ಸರ್ಕಾರದ ಯೋಜನೆಗಳು ಅನುಕೂಲವಾಗಿವೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಕ್ ತಿಳಿಸಿದರು.
ಅವರು ನಿಪ್ಪಾಣಿ ತಾಲೂಕಿನ ಶಿರದವಾಡ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಹೋಬಳಿ ಮಟ್ಟದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಚಿಕ್ಕೋಡಿ ತಾಲೂಕಿನ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಎಂ.ಟಿ ಜನಗೌಡ ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಎ.ಕಾಗೆ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಶಿಸ್ತು ಸಂಯಮ ಸಾಮಾನ್ಯಜ್ಞಾನ ಸುಸಂಸ್ಕೃತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.
ಹೊರತಾಗಿ ಖಾಸಗಿ ಶಾಲೆಗಳಂತೆ ಕೇವಲ ಯುನಿಫಾರ್ಮಕ್ಕೆ ಹಾಗೂ ಹೈಫೈ ನಡುವಳಿಕೆಯ ಕಿಳಿಪಾಠವಲ್ಲವೆಂದರು ಕಾರ್ಯಕ್ರಮದಲ್ಲಿ ಪಾಲಕರ ಪರವಾಗಿ ಜನವಾಡ ಗ್ರಾಮದ ಉದಯ್ ಪಾಟೀಲ್ ಮಾತನಾಡಿ ಸರ್ಕಾರಿ ಶಾಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿ ಅನು ಜಾಂಗಡೆ ತಾಲೂಕಿಗೆ ಪ್ರಥಮ ಶ್ರೇಣಿ ಪಡೆದು ಶಾಲೆ ಕೀರ್ತಿ ಹೆಚ್ಚಿಸಿದಕ್ಕೆ ಅಭಿನಂದಿಸಿದರು.ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು *ಬಾಲಕ ಪಾಲಕ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದರು ಇದೇ ಸಂದರ್ಭದಲ್ಲಿ ದಾಖಲಾತಿ ಹೆಚ್ಚಿಸುವ ಸಾಮೂಹಿಕ ಪ್ರತಿಜ್ಞೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿರದವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಾಳಾಬಾಯಿ ಪೂಜಾರಿ, ಜನವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನಾತನ ಮಗದುಮ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಕಾಗೆ ಅಶೋಕ್ ಹೊನ್ನಾಯ್ಕ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಡಿಸಿ ವಾಕಪಟ್ಟೆ ರಾಜು ಕೊಕನೆ ಸಂಜಯ ಬುಡಕೆ ಸೇರಿದಂತೆ ಜನವಾಡ ಶಿರದ ವಾಡ ,ದೊಣೆವಾಡಿ ಗ್ರಾಮ ಪಂಚಾಯಿತಿ ಸದಸ್ಯರು ಪಾಲಕರು ಉಪಸ್ಥಿತರಿದ್ದರು. ಕೆ ಟಿ ನಾಡಕರ್ಣಿ ಸ್ವಾಗತಿಸಿದರು ಎಸ್ ಕೆ ಯಮಕಣ್ಮರಡಿ. ನಿರೂಪಿಸಿ ಎಂ ಎ ಜೋಶಿ ವಂದಿಸಿದರು.
ವರದಿ: ಮಹಾವೀರ ಚಿಂಚಣೆ