Ad imageAd image

ಜಿಎಸ್ಟಿ ತೆರಿಗೆ ಎಫೆಕ್ಟ್ : ರಾಜ್ಯಾದ್ಯಂತ 3ದಿನ ಹಾಲು ಮಾರಾಟ ಬಂದ್

Bharath Vaibhav
ಜಿಎಸ್ಟಿ ತೆರಿಗೆ ಎಫೆಕ್ಟ್ : ರಾಜ್ಯಾದ್ಯಂತ 3ದಿನ ಹಾಲು ಮಾರಾಟ ಬಂದ್
WhatsApp Group Join Now
Telegram Group Join Now

ಬೆಂಗಳೂರು : ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟವನ್ನು ಮೂರು ದಿನ ಬಂದ್ ಮಾಡೋಕೆ ಮುಂದಾಗಿದ್ದಾರೆ.

ಹೌದು ಜುಲೈ 21 ರೊಳಗೆ ಜಿಎಸ್ ಟಿ ತೆರಿಗೆ ಪಾವತಿ ಮಾಡದೇ ಇದ್ರೆ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಮನ್ನಾ ಮಾಡುವಂತೆ  ತೆರಿಗೆ ವರ್ತಕರು ಮನವಿ ಮಾಡಿದ್ದು, 10 ದಿನ ಗಡುವು ನೀಡಿದ್ದಾರೆ.

ಈ ಹಿನ್ನೆಲೆ ವರ್ತಕರು ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟವನ್ನು ಮೂರು ದಿನ ಬಂದ್ ಮಾಡೋಕೆ ಮುಂದಾಗಿದ್ದಾರೆ .  ಜುಲೈ 23, 24. 25 ರಂದು ರಾಜ್ಯಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಬಂದ್ ಆಗಲಿದೆ.

40 ಲಕ್ಷ ರು.ಗಿಂತ ಹೆಚ್ಚಿನ ವಹಿವಾಟಿಗೆ ಜಿಎಸ್ಟಿ ತೆರಿಗೆ ನೋಟಿಸ್ ಬಂದ ಹಿನ್ನೆಲೆ ವ್ಯಾಪಾರಿಗಳು ಬೆಚ್ಚಿ ಬಿದ್ದಿದ್ದು, ಯುಪಿಐ ಮೂಲಕ ಹಣ ಸ್ವೀಕಾರಕ್ಕೆ ನಿರಾಕರಿಸುತ್ತಿದ್ದಾರೆ.

ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ನೋಟಿಸ್ ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!