Ad imageAd image

ಹು – ಧಾ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು

Bharath Vaibhav
ಹು – ಧಾ ಮಹಾನಗರ ಪಾಲಿಕೆ ಮೇಯರ್  ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು
WhatsApp Group Join Now
Telegram Group Join Now

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗದ್ದುಗೆಯನ್ನು ಬಿಜೆಪಿ ತನ್ನ ತಕ್ಕೆಗೆ ತಗೆದುಕೊಂಡಿದ್ದು, ಬಿಜೆಪಿಯ ಅಭ್ಯರ್ಥಿಗಳು ಮೇಯರ್ ಹಾಗೂ ಉಪಮೇಯರ್ ಆಗಿ ಹೊರಹೊಮ್ಮಿದ್ದಾರೆ.

ಧಾರವಾಡದ ಪಾಲಿಕೆ ಸದಸ್ಯೆಯಾದ ಜ್ಯೋತಿ ಪಾಟೀಲ್ ಮೇಯರ್ ಆಗಿ ಹಾಗೂ ಹುಬ್ಬಳ್ಳಿ ಪಾಲಿಕೆ ಸದಸ್ಯರಾದ ಸಂತೋಷ್ ಚವ್ಹಾನ್ ಉಪಮೇಯರ್ ಆಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆಂದು ಪ್ರಾದೇಶಿಕ ಆಯುಕ್ತರಾದ ಸಿದ್ದಣ್ಣಾ ಬಿರಾದಾರ ಅವರು ಘೋಷಣೆ ಮಾಡಿದ್ದಾರೆ.

ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಜ್ಯೋತಿ ಪಾಟೀಲ್, ಸುವರ್ಣಾ ಕಲಕುಂಟ್ಲಾ ಹಾಗೂ ವಹೀದಾಖಾನಂ ಕಿತ್ತೂರ ನಾಮಪತ್ರ ಸಲ್ಲಿದರೇ ಉಪಮೇಯರ್ ಸ್ಥಾನಕ್ಕೆ ಸಂತೋಷ್ ಚವ್ಹಾನ್, ಶಂಭುಲಿಂಗ ಸಾಲಮನಿ ಅವರು ನಾಮಪತ್ರ ಸಲ್ಲಿಸಿದ್ದರು. ಇದೀಗ ೨೪ ನೇ ಅವಧಿಗೆ ಮೇಯರ್ ಆಗಿ ಜ್ಯೋತಿ ಪಾಟೀಲ್ ಹಾಗುಇ ಉಪಮೇಯರ್ ಆಗಿ ಸಂತೋಷ್ ಚವ್ಹಾನ್ ಆಗಿ ಆಯ್ಕೆಯಾಗಿದ್ದು, ಪಾಲಿಕೆಯ ಆವರಣದಲ್ಲಿ ಬಿಜೆಪಿಯ ಪಾಲಿಕೆಯ ಸದಸ್ಯರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ವರದಿ  : ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!