Ad imageAd image

ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಿ ಎಂದು ಯಾವನ ಮನೆಗೂ ನಾನು ಹೋಗಿಲ್ಲ : ಶಾಸಕ ಯತ್ನಾಳ್

Bharath Vaibhav
ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಿ ಎಂದು ಯಾವನ ಮನೆಗೂ ನಾನು ಹೋಗಿಲ್ಲ : ಶಾಸಕ ಯತ್ನಾಳ್
YATNAL
WhatsApp Group Join Now
Telegram Group Join Now

ವಿಜಯಪುರ : ಬಿಜೆಪಿಯಿಂದ ಉಚ್ಚಾಟನೆ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಒಂದೆಲ್ಲಾ ಒಂದು ರೀತಿ ಹೇಳಿಕೆಕೊಟ್ಟು ವಿಜಯೇಂದ್ರ ಬಣಕ್ಕೆ ಟಾಂಗ್ ನೀಡ್ತಿದ್ದಾರೆ.

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವರಸೆಯನ್ನು ಮುಂದುವರಿಸಿದ್ದು, ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಿ ಎಂದು ಯಾವನ ಮನೆಗೂ ನಾನು ಹೋಗಿಲ್ಲ, ಅದರ ಅವಶ್ಯಕತೆಯೇ ನನಗಿಲ್ಲ ಎಂದಿದ್ದಾರೆ.

ದೆಹಲಿ ವರಿಷ್ಠರೆಲ್ಲ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾಯಕರ ಜತೆ ಉತ್ತಮ ಬಾಂಧವ್ಯ ಇದೆ.ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿ ನಂತರ ದೆಹಲಿಯ ಬಿಜೆಪಿ ನಾಯಕರೆಲ್ಲ, ಭಯೋತ್ಪಾದಕರನ್ನು ಹತ್ತಿಕ್ಕುವ, ಪಾಕಿಸ್ತಾನಕ್ಕೆ ಪಾಠ ಕಲಿಸುವ, ಅಪರೇಷನ್ ಸಿಂಧೂರ, ಕದನ ವಿರಾಮದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಯಾವುದೇ ನಾಯಕನಿಗೆ ತನ್ನ ಕುಟುಂಬದ ಜೊತೆ ಮಾತಾಡುವಷ್ಟೂ ವ್ಯವಧಾನವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!