Ad imageAd image

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದು ಸಂಜೆ ಪ್ರಿಯತಮನ ವರಸಿದ ಹುಡುಗಿ 

Bharath Vaibhav
ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದು ಸಂಜೆ ಪ್ರಿಯತಮನ ವರಸಿದ ಹುಡುಗಿ 
WhatsApp Group Join Now
Telegram Group Join Now

ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ನಡೆಯಬೇಕಿದ್ದ ಮದುವೆಯೊಂದು ಕೊನೆ ಕ್ಷಣದಲ್ಲಿ ರದ್ದಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ, ಸಂಜೆಯ ವೇಳೆಗೆ ಆ ದಿನವೇ ಗಣೇಶನ ದೇವಸ್ಥಾನದಲ್ಲಿ ಪಲ್ಲವಿ ಎಂಬ ಯುವತಿ ತನ್ನ ಪ್ರಿಯಕರ ರಘುವಿನ ಜೊತೆ ಹಸೆಮಣೆ ಏರಿದ ಘಟನೆ ಎಲ್ಲರ ಗಮನ ಸೆಳೆಯಿತು.

ಬೆಳಗ್ಗೆ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪಲ್ಲವಿಯ ಮದುವೆ ಒಂದು ಯುವಕನ ಜೊತೆ ಆಗಬೇಕಿತ್ತು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ತಳಿರು ತೋರಣಗಳಿಂದ ಮಂಟಪವನ್ನು ಅಲಂಕರಿಸಲಾಗಿತ್ತು, ಆರತಕ್ಷತೆಗೆ ಸಕಲ ಸಿದ್ಧತೆಗಳು ಮಾಡಲಾಗಿತ್ತು.

ಆದರೆ, ವಧುವಾದ ಪಲ್ಲವಿ ತಾನು ಪ್ರೀತಿಸದ ಯುವಕನೊಂದಿಗೆ ಜೀವನ ಕಟ್ಟಿಕೊಳ್ಳಲು ಒಪ್ಪದ ಆಕೆ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಳು. ಈ ನಿರ್ಧಾರ ಕುಟುಂಬಸ್ಥರಿಗೆ ಆಘಾತವನ್ನುಂಟುಮಾಡಿತ್ತು.

ಪಲ್ಲವಿಯ ಈ ಧೈರ್ಯದ ನಿರ್ಧಾರದ ಹಿಂದೆ ಒಂದು ಸುಂದರವಾದ ಪ್ರೀತಿಯ ಕತೆ ಇತ್ತು. ರಘು ಎಂಬ ಯುವಕನನ್ನು ಆಕೆ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು.

ಆದರೆ, ಕುಟುಂಬದ ಒತ್ತಡದಿಂದಾಗಿ ಆಕೆಯ ಪ್ರೀತಿಯ ವಿಷಯ ಮುಚ್ಚಿಟ್ಟಿದ್ದಳು. ಆದರೆ ವಿವಾಹದ ದಿನ ನಿಶ್ಚಯ ಮಾಡಿದ್ದ ವರನೊಂದಿಗೆ ಮದ್ವೆ ರದ್ದುಗೊಳಿಸಿ ತನ್ನ ಪ್ರೀತಿಯ ವಿಚಾರ ಕುಟುಂಬದವರಿಗೆ ತಿಳಿಸಿದಳು.

ಸಂಜೆಯ ವೇಳೆಗೆ, ಗಣೇಶನ ದೇವಸ್ಥಾನದಲ್ಲಿ ಒಂದು ಸರಳವಾಗಿ ವಿವಾಹ ಸಮಾರಂಭ ನಡೆಯಿತು. ಹಿಂದೂ ಸಂಪ್ರದಾಯದಂತೆ, ಜಲ ಮತ್ತು ಅಗ್ನಿಯ ಸಾಕ್ಷಿಯೊಂದಿಗೆ ಪಲ್ಲವಿ ಮತ್ತು ರಘು ತಾಳಿ ಕಟ್ಟಿಕೊಂಡು ಸಪ್ತಪದಿ ತುಳಿದರು. ಕುಟುಂಬಸ್ಥರು, ಆರಂಭದಲ್ಲಿ ಆಘಾತಕ್ಕೊಳಗಾದರೂ, ಕೊನೆಗೆ ಪಲ್ಲವಿಯ ಪ್ರೀತಿಯನ್ನು ಕುಟುಂಬದವರು ಒಪ್ಪಿಕೊಂಡರು.

 

 

 

WhatsApp Group Join Now
Telegram Group Join Now
Share This Article
error: Content is protected !!