ತುಮಕೂರು : ಬಿಜೆಪಿ ತಟ್ಟೆಯಲ್ಲೇ ಹೆಗ್ಗಣ ಸತ್ತಿದೆ ನಮಗೆ ಹೇಳೋಕೆ ಬರುತ್ತಾರೆ.. ನಾನೇನಾದ್ರೂ ವಿಜಯೇಂದ್ರ ಸ್ಥಾನದಲ್ಲಿ ಇದ್ದಿದ್ರೆ ಶಾಸಕ ಯತ್ನಾಳ್ ಅವರನ್ನು ಅಮಾನತು ಮಾಡುತ್ತಿದ್ದೆ. ವಿಜಯೇಂದ್ರ ಬಗ್ಗೆ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ಇವರು ಒಂದು ಬಾರಿಯಾದರೂ ನೋಟಿಸ್ ಕೊಟ್ಟಿದ್ದಾರಾ? ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಸೃಷ್ಟಿಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಕೆ ಎನ್ ರಾಜಣ್ಣ ತಿರುಗೇಟು ನೀಡಿದ್ದು, ನಮ್ಮಲ್ಲೂ ಶಿಸ್ತು ಸಮಿತಿ ಇರುತ್ತೆ ಅಲ್ವಾ? ನಮ್ಮಲ್ಲಿ ಭಿನ್ನಮತ ಇರಬಹುದು ಆದರೆ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ರು
ಇನ್ನು ಸಿಎಂ ಅಧಿಕಾರಾವಧಿ ಕುರಿತು ಮಾತನಾಡಿದ ರಾಜಣ್ಣ ಎರಡುವರೆ ವರ್ಷ ಅಂತ ಎಲ್ಲಿದೆ? ಕೆಪಿಸಿಸಿಯಲ್ಲಿ ಏನಾದರೂ ಹೀಗೆ ಇದೆಯಾ? ಹೈಕಮಾಂಡ್ ನಾಯಕರು ಹಾಗೇನಾದರೂ ಸಹಿ ಮಾಡಿಕೊಟ್ಟಿದ್ದಾರಾ? ನಮ್ಮ ಪಕ್ಷದಲ್ಲಿ ಎಲ್ಲೂ ಹೀಗೆ ಬರೆದಿಲ್ಲ. ಹಾಗೆ ಹೇಳಿಯೂ ಇಲ್ಲ ಎಂದರು.
ರಾಜ್ಯದಲ್ಲಿ ದಾವಣಗೆರೆ ಚಿತ್ರದುರ್ಗ ಅಥವಾ ಹುಬ್ಬಳ್ಳಿಯಲ್ಲಿ ದಲಿತ ಸಮಾವೇಶ ಮಾಡುವ ಉದ್ದೇಶ ಇದೆ. ಸಮಾವೇಶಕ್ಕೆ ಎಐಸಿಸಿ ನಾಯಕರಿಗೆ ಆಹ್ವಾನ ನೀಡಲಾಗುತ್ತೆ.
ಕಾಂಗ್ರೆಸ್ ಪಕ್ಷದ ಅಡಿಯಲ್ಲಿಯೇ ಶೋಷಿತರ ಸಮಾವೇಶವನ್ನು ನಡೆಸಲಾಗುತ್ತದೆ ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಯುತ್ತಿದ್ದು, ಹೈಕಮಾಂಡ್ ನಾಯಕರನ್ನು ಒಪ್ಪಿಸಿಯೇ ಈ ಸಮಾವೇಶ ನಡೆಸುತ್ತೇವೆ ಎಂದು ಕೆ ಎನ್ ರಾಜಣ್ಣ ಹೇಳಿದರು