Ad imageAd image

ಶುದ್ಧ ಕುಡಿವ ನೀರು ಸರಬರಾಜು ಚಾಲನಾ ಕಾರ್ಯಕ್ರಮಕ್ಕೆ ಶಾಸಕ ಎನ್ ವೈ ಗೋಪಾಲಕೃಷ್ಣ ಚಾಲನೆ

Bharath Vaibhav
ಶುದ್ಧ ಕುಡಿವ ನೀರು ಸರಬರಾಜು ಚಾಲನಾ ಕಾರ್ಯಕ್ರಮಕ್ಕೆ ಶಾಸಕ ಎನ್ ವೈ ಗೋಪಾಲಕೃಷ್ಣ ಚಾಲನೆ
WhatsApp Group Join Now
Telegram Group Join Now

ಮೊಳಕಾಲ್ಮುರು:  ಪಟ್ಟಣದ ಹಾನಗಲ್‌ ರಸ್ತೆಯಲ್ಲಿ ತುಂಗಭದ್ರ ಜಲಾಶಯದ ಹಿನ್ನೀರಿನಿಂದ ಪಟ್ಟಣಕ್ಕೆ ಶುದ್ಧ ಕುಡಿವ ನೀರು ಸರಬರಾಜು ಮಾಡುವ ಮಾರ್ಗದ ಪ್ರಾಯೋಗಿಕ ಚಾಲನಾ ಕಾರ್ಯಕ್ರಮಕ್ಕೆ ಶಾಸಕ ಎನ್ ವೈ ಗೋಪಾಲಕೃಷ್ಣ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು,ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸುವುದು ತರವಲ್ಲ. ಮೊದಲಿನಿಂದಲೂ ಹಿಂದುಳಿದಿರುವ ಮೊಳಕಾಲ್ಕುರು ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಸಹಜವಾಗಿಯೇ ನೀರಿನ ಅವಶ್ಯಕತೆಯೂ ಹೆಚ್ಚಾಗಿದೆ. ಈಗ ಸರಬರಾಜು ಮಾಡುತ್ತಿರುವ ತುಂಗಭದ್ರಾ ಹಿನ್ನೀರಿನ ಶುದ್ಧ ಕುಡಿವ ನೀರನ್ನು ಜನರು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು.

ಹಕೂಡ್ಲಿಗಿ ತಾಲೂಕಿನ ಗುಡೇಕೋಟಿ, ಮೊಳಕಾಲ್ಕುರು ಪಟ್ಟಣ, ಬಿ.ಜಿ.ಕೆರೆ ಹಾಗೂ ರಾಂಪುರ ಭಾಗಗಳಲ್ಲಿಯೂ ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಉದ್ಭವವಾಗಿದ್ದು, ಈ ಸಮಸ್ಯೆಗಳನ್ನು ಸ್ಥಳೀಯ ಮುಖಂಡರುಗಳ ಜೊತೆ ಚರ್ಚಿಸಿ ಬಗೆಹರಿಸಲು ಶ್ರಮಿಸಿದ್ದೆ ಎಂದರು.

ಸ್ಥಳದಲ್ಲಿ ತಹಸೀಲ್ದಾ‌ರ್ ಟಿ.ಜಗದೀಶ್, ಪಪಂ ಅಧ್ಯಕ್ಷೆ ಲೀಲಾವತಿ, ಮುಖ್ಯಾಧಿಕಾರಿ ಎಚ್.ಡಿ.ಲಿಂಗರಾಜ್, ಸದಸ್ಯರಾದ ಶುಭಾ, ರೂಪಾ, ಪದ್ಮಾವತಿ, ಎಸ್.ಖಾದರ್, ಪಶು ಸಂಗೋಪನಾ ಇಲಾಖೆ ಎಇಇ ಡಾ.ಎಚ್.ರಂಗಪ್ಪ, ಜಿಪಂ ಉಪ ವಿಭಾಗದ ಎಇಇ ಲಿಂಗರಾಜ್ ಸೇರಿದಂತೆ ಹಲವರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
Share This Article
error: Content is protected !!