ಬಳ್ಳಾರಿ: ಬಳ್ಳಾರಿಯಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ..
ಸಿಎಂ ಬಗ್ಗೆ ಸಚಿವರಿಗೆ ಅಸಮಾಧಾನ ಇದೆ ಎಂದು ಯಾರು ಹೇಳಿದ್ದಾರೆ.
ಮಾಧ್ಯಮದವರಿಗೆ ಅಸಮಾಧಾನ ಇದೆ ಎಂದು ಹೇಳಿದ್ದವರು ಯಾರು..?
ಮಾಧ್ಯಮದವರಿಗೆ ಮನವಿ ಮಾಡ್ತೇನೆ ಆ ರೀತಿಯಲ್ಲಿ ಕೇಳಬೇಡಿ..
ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ..
ರಾಜ್ಯದ ಅನುದಾನ ಇಲ್ಲವಾದ್ರೇ ಕೇಂದ್ರದಿಂದ ಯಾವ ರೀತಿ ಅನುದಾನ ಬತುತ್ತದೆ ಕೇಳಬೇಕಲ್ವ..?
ಗವಿಯಪ್ಪ ಅನುದಾನ ಬಂದಿಲ್ಲ ಎಂದಿರೋದು ನಿಜ ಆದ್ರೇ ಅದನ್ನು ಅವರನ್ನು ಕೇಳಿ..
ಮೊನ್ನೆ ಬಜೆಟ್ ಮಂಡನೆ ಮಾಡಿದ್ದೇವೆ ಬಿಜೆಪಿಯವರಿಗಿಂತ ಹೆಚ್ಚು ಅನುದಾನ ನೀಡಿದ್ದೇವೆ..
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಇಲಾಖೆಯಲ್ಲಿ ಎಷ್ಟು ಖರ್ಚು ಮಾಡಿದ್ದೇವೋ ಅದಕ್ಕಿಂತ ಹೆಚ್ಚು ಹಣ ನೀಡ್ತಿದ್ದೇವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುದು ಸಾಮಾನ್ಯ. ಇದರಿಂದ ಸರ್ಕಾರ ಉರುಳುತ್ತದೆ ಪಾರ್ಟಿ ಬಿಡ್ತಾರೆ ಎಂದಲ್ಲ..
ಬಿಅರ್ ಪಾಟೀಲ್ ಮಾತನಾಡಿದ್ದಾರೆ ಸಿಎಂ ಡಿಸಿಎಂ ಅವರನ್ನು ಕರೆದು ಮಾತನಾಡಿದ್ದಾರೆ..
ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಅಂತಾ ಕೇಳೋರು ಮೋದಿ ಐದು ವರ್ಷ ಇರುತ್ತಾರೆ ಕೇಳಿರಿ..
ನಮ್ಮದು ಪೂರ್ಣ ಪ್ರಮಾಣದ ಸರ್ಕಾರ ಮೋದಿ ಸರ್ಕಾರ ಸಮ್ಮಿಶ್ರ ಸರ್ಕಾರ..
ರಾಜಕೀಯದಲ್ಲಿ ನಮ್ಮನ್ನಷ್ಟೇ ಪ್ರಶ್ನೆ ಕೇಳ ಬೇಡಿ ಬಿಜೆಪಿ ಅವರನ್ನು ಕೇಳಿರಿ..
ರವಿಕುಮಾರ್ ಕ್ಷಮೆ ಕೇಳುವ ವಿಚಾರ ಅವರಿಗೆ ಬಿಟ್ಟಿರೋದು..
ಸಿಎಂ ಪೊಲೀಸ್ ಅಧಿಕಾರಿಗೆ ಕೈ ಎತ್ತಿರೋದು ಇದಕ್ಕೆ ಹೊಲಿಕೆ ಮಾಡಿದ್ರೇ ಏನು ಮಾಡಬೇಕು. ದೇವರು ಅವರಿಗೆ ಒಳ್ಳೆಯದು ಮಾಡಲಿ.
ಇಂತಹಾ ಹೇಳಿಕೆಯಿಂದ ಏನು ಸಾಧನೆ ಮಾಡಿದಂತಾಯ್ತು..
ಆಗ ಮುಸ್ಲಿಂ ಮಹಿಳೆಗೆ ಅವಮಾನ ಮಾಡಿದ್ರು ಪಾಕಿಸ್ತಾನದಿಂದ ಬಂದವರು ಎಂದಿದ್ರು.
ಈಗ ಹಿಂದೂ ಮಹಿಳೆಗೆ ಅವಮಾನ ಮಾಡಿದ್ರು.
ಶಾಲಿನ್ ರಜಿನಿಶ್ ಹಿಂದೂ ಅಲ್ವಾ..,? ಅವರಿಗ್ಯಾಕೆ ಅವಮಾನ ಮಾಡಿದ್ರು..
ನಾಚಿಕೆ ಬರೋ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೆವೆ.. ಇದರಿಂದನು ಅಭಿವೃದ್ಧಿಯಾಗಲ್ಲ..
ಎಲ್ಲರೂ ಹೇಗೆ ಮಾತನಾಡಬೇಕೋ ಅನ್ನೋದನ್ನು ಮೊದಲು ಅರಿತು ಮಾತನಾಡಬೇಕು..
ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಬಳ್ಳಾರಿಗೆ ಬರುತ್ತಿಲ್ಲ ಎನ್ನುವ ವಿಚಾರ..
ಅವರ ಜೊತೆ ಮಾತನಾಡ್ತೇನೆ ಎಂದ ಲಾಡ್..