ಲಿಂಗಸಗೂರು :ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರುರವರ ನಿರ್ದೇಶನದಂತೆ ದಿನಾಂಕ: 08-03-2025 ರಂದು ನಡೆಯುವ ರಾಷ್ಟ್ರೀಯ ಲೋಕ ಅಧಾಲತ್ ಅಂಗವಾಗಿ ಅಂಗಸಗೂರು ತಾಲೂಕು ಕಾನೂನು ಸೇವಾ ಸಮಿತಿಯ ಪೂರ್ವಭಾವಿ ಸಭೆಯನ್ನು ಮಾನ್ಯ ಗೌರವಾನ್ವಿತ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ಅಂಗಸಗೂರು ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಲಿಂಗಸಗೂರು ಹಾಗೂ ಗೌರವಾನ್ವಿತ ಅಂಬಣ್ಣ. ಕೆ ಪ್ರಧಾನ ಸಿವಿಲ್ ನ್ಯಾಯಧೀಶರು ಇವರುಗಳ ಅಧ್ಯಕ್ಷತೆಯಲ್ಲಿ ಅಂಗಸಗೂರಿನ ನ್ಯಾಯಾಲಯದ ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ, ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ನ್ಯಾಯಾಲಯದಲ್ಲಿ ಒಟ್ಟು ಮೂರು ಬಾರಿ ಲೋಕ ಅದಾಲತ್ ನಡೆದಿದ್ದು ಅದರಲ್ಲಿ ಜುಲೈ ತಿಂಗಳ ಲೋಕ ಅದಾಲತ್ ನಲ್ಲಿ 1741 ರಾಜಿ ಸಂಧಾನ ವಾಗಿದ್ದು ಇದರಲ್ಲಿ ಒಟ್ಟು 1.49.63.000 ( ಒಂದು ಕೋಟಿ ನಲವತ್ತ ಒಂಬತ್ತು ಲಕ್ಷ ಅರವತ್ತ ಮೂರು ಸಾವಿರ ) ಹಣ ಸಂಧಾನವಾಗಿದ್ದು . ಎರಡನೇ ಬಾರಿಯ ಸೆಪ್ಟೆಂಬರ್ ತಿಂಗಳ ಲೋಕ ಅದಾಲತ್ ನಲ್ಲಿ 1972 ಕೇಸ್ ರಾಜಿ ಸಂಧಾನವಾಗಿದ್ದು ಇದರಲ್ಲಿ 3 ( ಮೂರು ಕೋಟಿ ) ಗೂ ಹೆಚ್ಚು ಹಣ ಸಂಧಾನವಾಗಿದ್ದು . ಮೂರನೇ ಬಾರಿಯ ಡಿಸೆಂಬರ್ ತಿಂಗಳ ಲೋಕ ಅದಾಲತ್ ನಲ್ಲಿ 2 163 ಕೇಸ್ ರಾಜಿ ಸಂಧಾನವಾಗಿದ್ದು ಇದರಲ್ಲಿ 3.64. 00000 ( ಮೂರು ಕೋಟಿ ಅರವತ್ತ ನಾಲ್ಕು ಲಕ್ಷ ) ಹಣ ಸಂಧಾನ ವಾಗಿದ್ದು ಒಟ್ಟು 5876 ಕೇಸ್ ರಾಜಿ ಸಂಧಾನ ದಲ್ಲಿ ಒಟ್ಟು 8.13.63000 ( ಎಂಟು ಕೋಟಿ ಅದಿಮೂರು ಲಕ್ಷ ಅರವತ್ತ ಮೂರು ಸಾವಿರ ) ಕ್ಕೂ ಹೆಚ್ಚು ಹಣ ರಾಜಿ ಸಂಧಾನದಿಂದ ಸಂಧಾನ ವಾಗಿದೆ ಈ ಮೂರು ಲೋಕ ಅದಾಲತ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದು ನಾಲ್ಕನೇ ಲೋಕ ಅದಾಲತ್ ನಲ್ಲಿ ಇದಕ್ಕೂ ಹೆಚ್ಚು ಕೇಸ್ ಗಳು ರಾಜಿ ಸಂಧಾನದಿಂದ ತಮ್ಮ ಕೇಸನ್ನು ಇತ್ಯಾರ್ಥ ಪಡಿಸಿಕೊಳ್ಳಲಿ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಅಮರೇಶ್ ಶಿರಸ್ತೆ ದಾರರು , ಪಿಎಸ್ಐ ರಾಘವೇಂದ್ರ , ಪಿಎಸ್ಐ ಧರ್ಮಪ್ಪ , ವಕೀಲರಾದ ಬಸವರಾಜ್ ಪ್ಯಾಟಿ , ಅಬ್ದುಲ್ ಸೇಠ್ , ಈಶ್ವರ್ ಜಾದವ್, ಶಶಿಧರ್ ಹೊಸಮನಿ, ವೆಂಕೋಬ ಸೇರಿದಂತೆ ಇನ್ನು ಹಲವರು ಇದ್ದರು.